ಕೊಡಗು

ಮಡಿಕೇರಿ: ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ,ಕಣ್ಮನ ಸೆಳೆಯುತ್ತಿರುವ ಹೂಗಳ ರಾಶಿ

ನ್ಯೂಸ್ ನಾಟೌಟ್ : ಹೂವು ಚೆಲುವೆಲ್ಲಾ ನಂದೆಂದಿತು ಎನ್ನುತ್ತಾ , ಜನರನ್ನ ತನ್ನತ್ತ ಸೆಳೆಯುತ್ತಿದೆ.ಎತ್ತ ನೋಡಿದರತ್ತ ಹೂವುಗಳ ರಾಶಿ ಕಣ್ಮನ ಸೆಳೆಯುತ್ತಿದೆ.ಬಗೆಬಗೆಯ ಕಲರ್ ನಲ್ಲಿ ಹೂವುಗಳ ಸೌಂದರ್ಯ ಮಡಿಕೇರಿಯ ರಾಜಾಸೀಟ್ ನಲ್ಲಿ ನೋಡುಗರ ಗಮನ ಸೆಳೆಯುತ್ತಿದೆ. ಅಲ್ಲೇ ಪಕ್ಕದ ಗಾಂಧಿ ಮೈದಾನದಲ್ಲಿ ವಿವಿಧ ಬಗೆಯ ವೈನ್‌ಗಳು, ತರಹೇವಾರಿ ಮಳಿಗೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಹೌದು, ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನ ಹಾಗೂ ವೈನ್‌ ಮೇಳ ವೀಕ್ಷಿಸಲೆಂದೆ ಸಾವಿರಾರು ಜನ ಇಲ್ಲಿಗೆ ಆಗಮಿಸುತ್ತಿದ್ದಾರೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ದ್ರಾಕ್ಷರಸ ಮಂಡಳಿಯಿಂದ ಆಯೋಜನೆಗೊಂಡಿರುವ ಈ ಮೇಳವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ನಿನ್ನೆ ಉದ್ಘಾಟಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಮತದಾನದ ಕುರಿತು ಅರಿವು ಮೂಡಿಸಲು ಎಲೆಕ್ಟ್ರಾನಿಕ್ ಮತಯಂತ್ರದ ಮಾದರಿಯನ್ನು ಹೂವಿನಿಂದ ರೂಪಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಮುಂದೆ ಜನ ಫೋಟೋ, ಸೆಲ್ಫಿ ತೆಗೆದು ಕೊಂಡು ಸಂಭ್ರಮ ಪಡುತ್ತಿದ್ದಾರೆ.ಇದಿಷ್ಟು ಮಾತ್ರವಲ್ಲ, ಇಲ್ಲಿ ನೂರಾರು ನಮೂನೆಯ ಗಿಡಗಳು ಮನಸೂರೆಗೊಳ್ಳುತ್ತವೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಹಾಗೂ ಅಂಥೋರಿಯಂ ಹೂವಿನ ಪ್ರದರ್ಶನಗಳು,ಹೂವಿನ ನಾಲ್ಕುನಾಡು ಅರಮನೆಯ ಕಲಾಕೃತಿ, ದಪ್ಪಮೆಣಸಿನಕಾಯಿ ಹಾಗೂ ವೈನ್‌ ಗ್ಲಾಸಿನ ಸೆಲ್ಫೀ ಜೋನ್‌ಗಳು ಮೂಕವಿಸ್ಮಿತರನ್ನಾಗಿ ಮಾಡುತ್ತಿವೆ.

ಹೂವಿನ ಸಿಂಡ್ರೆಲ್‌ ಕಲಾಕೃತಿ, ಹೆಸರುಕಾಳು ಮತ್ತು ಬಿಳಿ ಎಳ್ಳು ಮೂಲಕ ಕ್ರೀಯಾಶೀಲವಾಗಿ ನಿರ್ಮಾಣ ಮಾಡಿರುವ ಸೈನಿಕ, ಮಿಕ್ಕಿಮೌಸ್, ಚಿಟ್ಟೆಗಳ ಹೂವಿನ ಕಲಾಕೃತಿಗಳು ಗಮನ ಸೆಳೆಯುತ್ತಿವೆ.ಒಟ್ಟಿನಲ್ಲಿ ಈ ಸಂಭ್ರಮಕ್ಕೆ ಇನ್ನು ಮೂರು ದಿನಗಳು ಬಾಕಿ ಇದ್ದು, ಪ್ರವಾಸಿಗರು ದೂರದೂರುಗಳಿಂದ ಬಂದು ಈ ವೈಭವ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

Related posts

ಕೊಡಗಿನ ಸುಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ನಲ್ಲಿ ಬೆಂಕಿ ಅವಘಡ

ಕೊಡಗು: ಟ್ರಾಲಿ ಬ್ಯಾಗ್ ನಲ್ಲಿಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ,ಕೊಲೆ ಶಂಕೆ

ಕಡಬ/ಮಡಿಕೇರಿ:ಭೀಕರ ರಸ್ತೆ ಅಪಘಾತ ; ಓರ್ವ ದುರಂತ ಅಂತ್ಯ; ಒಂದೇ ಕುಟುಂಬದ ಎಂಟು ಮಂದಿಗೆ ಗಾಯ