ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ಜನ ಕಂಪನದಿಂದ ಭಯಭೀತರಾಗಿ ಮನೆಯಿಂದ ಹೊರಗೆ ಬಂದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ ಗ್ರಾಮ ಪಂಚಾಯಿತಿಯ ಮಲುಗಾನ ಹಳ್ಳಿಯಿಂದ ೦.೯ ಕಿ.ಮೀ. ದೂರದಲ್ಲಿ ೧೦ ಅಡಿ ಆಳದಲ್ಲಿ ಬೆಳಗ್ಗೆ ೪ ಗಂಟೆ ೩೭ ನಿಮಿಷ ೨೧ ಸೆಕೆಂಡ್‌ಗೆ ಭೂಕಂಪನವಾಗಿದೆ.
ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ನೀಡಿದೆ. ಈ ಪ್ರಕಾರವಾಗಿ ಕೊಡಗಿನ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ಅಮ್ಮಳ್ಳಿ ಗ್ರಾಮ, ನೇಗಳ್ಳೆ ಗ್ರಾಮ, ಮಡಿಕೇರಿ ತಾಲೂಕಿನ ದೇವಸ್ತೂರು ಹಾಗೂ ಹಾಸನದ ಗಡಿ ಪ್ರದೇಶದ ಕೆಲವೆಡೆ ಭೂಕಂಪನದ ಅನುಭವ ಆಗಿದೆ ಎಂದು ತಿಳಿದು ಬಂದಿದೆ.