ಕೊಡಗು

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ, ಭಾಗಮಂಡಲ ತಲಕಾವೇರಿ, ನಾಪೋಕ್ಲು ತಲಕಾವೇರಿ ರಸ್ತೆ ಬಂದ್

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲ-ತಲಕಾವೇರಿ ಹಾಗೂ ನಾಪೋಕ್ಲು-ತಲಕಾವೇರಿ ಸಂಚರಿಸುವ ರಸ್ತೆ ಬಂದ್ ಆಗಿದೆ.

ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ನಿರಂತರ ಮಳೆಯಾಗುತ್ತಿದೆ. ಭಾರಿ ಮಳೆ ಹಿನ್ನಲೆ ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಭಾಗಮಂಡಲ – ತಲಕಾವೇರಿ ರಸ್ತೆಮೇಲೆ 2 ಅಡಿ‌ ನೀರು ನಿಂತಿದೆ. ನಾಪೋಕ್ಲು-ತಲಕಾವೇರಿ ರಸ್ತೆ ಮೇಲೆ 3/4 ಅಡಿ ನೀರು ಇದೆ ಎಂದು ವರದಿಯಾಗಿದೆ.

ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನವರೆಗು ನೀರು ಏರಿಕೆ ಕಂಡಿದೆ. ಮಳೆ ಹೆಚ್ಚಾದಲ್ಲಿ ಮತ್ತಷ್ಟು‌ ನೀರು ಏರುವ ಸಾಧ್ಯತೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಬೋಟ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಕಳೆದ ಒಂದು ತಿಂಗಳಿಂದ ಭಾಗಮಂಡಲದಲ್ಲಿ ಗೃಹ ರಕ್ಷಕದಳ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

Related posts

ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ – ಶಾಲಾ ಕಾಲೇಜುಗಳಿಗೆ ನಾಳೆಯೂ(25.07) ರಜೆ ಘೋಷಣೆ

ಮೆದೆನಾಡಿನಲ್ಲಿ ಭಾರಿ ಸದ್ದಿನೊಂದಿಗೆ ಕುಸಿದ ಬೆಟ್ಟ..!

ಲಂಚದ ಆಸೆಗೆ ಹೋಗಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟರು