ಕ್ರೀಡೆ/ಸಿನಿಮಾ

ಆತ್ಮಹತ್ಯೆಗೆ ನಿರ್ಧರಿಸಿದ್ರಾ ಖ್ಯಾತ ನಿರೂಪಕ ಕಿರಿಕ್ ಕೀರ್ತಿ, ವೈರಲ್ ಪೋಸ್ಟ್ ನಲ್ಲೇನಿದೆ?

ನ್ಯೂಸ್ ನಾಟೌಟ್ : ಕನ್ನಡದ ಖ್ಯಾತ ಟಿವಿ ನಿರೂಪಕ, ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಅವರು ಜಗತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದರು ಎಂದು ಹೇಳಿಕೊಂಡ ಪೋಸ್ಟ್ ವೊಂದು ವೈರಲ್‌ ಆಗಿದೆ.


ಕಿರಿಕ್ ಕೀರ್ತಿ ತನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ. ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾ ತೊಂದರೆಗೊಳಿಸಿದೆ ಎಂದು ಅವರು ಅದರಲ್ಲಿ ಹೇಳಿದ್ದಾರೆ. ಕಿರಿಕ್ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ನ್ನು ಹಂಚಿಕೊಂಡಿದ್ದು ಇದು ಬಾರಿ ವೈರಲ್ ಆಗಿದೆ.

ನಾನೊಂದು ನಿರ್ಧಾರ ಮಾಡಿದ್ದೆ. ನಾನು ಜಗತ್ತಿಗೆ ವಿದಾಯ ಹೇಳಿ ಬಿಡಬೇಕು ಅಂತ. ಕಾರಣಗಳು ಹಲವು. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳು ಇನ್ನಿಲ್ಲದಂತೆ ನನ್ನನ್ನು ಖಿನ್ನತೆಗೊಳಗಾಗುವಂತೆ ಮಾಡಿತ್ತು. ಜೀವನದ ಮೇಲೆ ಕೆಟ್ಟ ನಿರಾಸಕ್ತಿ ಬಂದಿತು. ಎಲ್ಲಾ ಪ್ರಯತ್ನಗಳು ಆಗಾಗ ಕೈ ಕೊಡುತ್ತಿತ್ತು. ಒಂದೆಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಕಂಗಾಲಾಗಿಸಿದೆ. ಸ್ವಲ್ಪ ದಿನ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದೆ. ಆದರೆ ಈಗ ಎಲ್ಲದಕ್ಕೂ ಹೆದರುತ್ತಿದ್ದರೆ ನನ್ನನ್ನು ನಂಬಿ ಬಂಡವಾಳ ಹಾಕಿದವರಿಗೆ ಏನೆಂದು ಹೇಳಲಿ. ನನ್ನನ್ನು ನಂಬಿ ಹೂಡಿಕೆ ಮಾಡಿದವರಿಗೆ ನ್ಯಾಯ ಸಿಗುವುದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟುವುದು ಹೇಗೆ..? ಈ ಪ್ರಶ್ನೆಗಳು ಕಾಡಿದ್ದು, ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡಿದ್ದೇನೆ’


ನಿರಂತರ 10 ನಿಮಿಷ ಧ್ಯಾನದಲ್ಲಿ ತೊಡಗಿದೆ.ಏನಾದರೂ ಸಾಧಿಸಬೇಕೆಂದು ಡಿಸೈಡ್ ಮಾಡಿದೆ.ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕಿದೆ.ಡಿಪ್ರೆಶನ್ ನಿಂದ ವಾಪಾಸ್ ಬರಲು ಸಹಕರಿಸಿ, ಮತ್ತೆ ನನ್ನ ಮುಖದ ಮೇಲೆ ನಗು ಬರುವಂತೆ ಮಾಡಲು ಸಹಕರಿಸಿ ಎಂದು ಹೇಳಿದ್ದಾರೆ .

Related posts

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ, ಚಾಲೆಂಜಿಂಗ್ ಸ್ಟಾರ್ ಮಾಡಿದ್ದ ಆ ಒಂದು ಮನವಿ ಏನು..?

ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ಕ್ರಿಕೆಟಿಗನ ನಿಶ್ಚಿತಾರ್ಥ..? ಯಾರಿಕೆ ಸಂಸದೆ..?

ರಾಕ್​​ಲೈನ್ ವೆಂಕಟೇಶ್ ಮಾಲ್ ಬೀಗಮುದ್ರೆ ತೆರೆಯಲು ಹೈಕೋರ್ಟ್ ಸೂಚನೆ, 11.51 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ, ರಾಕ್ ಲೈನ್ ಪುತ್ರನಿಂದ ಅವಾಜ್..!