ಸುಳ್ಯ

ಬಾಳೆಲೆ: ಆಡಲು ತೆರಳಿದ ಮಗು ಕೆರೆಯಲ್ಲಿ ಮುಳುಗಿ ದಾರುಣ ಸಾವು

1k

ಸುಳ್ಯ: ಬಾಳೆಲೆ ಗ್ರಾಮದಲ್ಲಿ ಆಟವಾಡಲು ಹೋದ ಮಗುವೊಂದು ಮಧ್ಯಾಹ್ನ ಸಮಯದಲ್ಲಿ  ನೀರು ಪಾಲದ ಘಟನೆ ನಡೆದಿದೆ. ಬಾಳೆಲೆ ಗ್ರಾಮದ ವಿಶ್ವನಾಥ್ ರವರಿಗೆ ಸೇರಿದ ಕೆರೆಯಲ್ಲಿ ಮಗು ಜಾರಿ ಬಿದ್ದು ಮೃತ ಪಟ್ಟಿದ್ದು,  ಮಧ್ಯಾಹ್ನ ಸಮಯ ಅಂದರೆ 11 ಗಂಟೆಯ ಆಸುಪಾಸಿನಲ್ಲಿ  ಆಟವಾಡಲು ತೆರಳಿದ್ದಂತಹ  ಮೂರು ಮಕ್ಕಳಲ್ಲಿ ತ್ರಿನೇಶ್ ಎನ್ನುವ ನಾಲ್ಕು ವರ್ಷದ  ಬಾಲಕ ಆಕಸ್ಮಾತ್ತಾಗಿ ಕಾಲು ಜಾರಿ ನೀರಿಗೆ ಬಿದ್ದು  ಮೃತಪಟ್ಟಿದ್ದಾನೆ. ಬಾಳೆಲೆ ಗ್ರಾಮದ  ಮಹೇಶ್ ಎನ್ನುವವರ ಮಗು ಸೇರಿ ಮೂರು ಮಕ್ಕಳು ಕೆರೆಯಲ್ಲಿ ಆಟವಾಡಲು ತೆರಳಿದ್ದು  ತ್ರಿನೆಶ್ ಎನ್ನುವ ಮಗು ಮೃತಪಟ್ಟಿದ್ದು ತಂದೆ ಕೆಲಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇದೀಗ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

See also  ಸುಳ್ಯ: ಸಿಡಿಲು ಬಡಿದು ಮನೆಗೋಡೆ , ವಿದ್ಯುತ್‌ ಉಪಕರಣಗಳಿಗೆ ಹಾನಿ!ಅದೃಷ್ಟವಶಾತ್‌ ಅಪಾಯದಿಂದ ಪಾರಾದ ಮನೆಯವರು!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget