Latestಕರಾವಳಿಸುಳ್ಯ

ಸುಳ್ಯ: ಸಿಡಿಲು ಬಡಿದು ಮನೆಗೋಡೆ , ವಿದ್ಯುತ್‌ ಉಪಕರಣಗಳಿಗೆ ಹಾನಿ!ಅದೃಷ್ಟವಶಾತ್‌ ಅಪಾಯದಿಂದ ಪಾರಾದ ಮನೆಯವರು!

524

ನ್ಯೂಸ್‌ ನಾಟೌಟ್: ನಿನ್ನೆ (ರವಿವಾರ 27)ವಿಪರೀತ ಗಾಳಿಯೊಂದಿಗೆ  ಗುಡುಗು ಸಹಿತ ಸುರಿದ ಭಾರಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಸುಳ್ಯದ ಬೋರುಗುಡ್ಡೆ ಬಳಿ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯ ಗೋಡೆ ಹಾಗೂ ವಿದ್ಯುತ್‌ ಉಪಕರಣಗಳು ಹಾನಿಗೊಂಡ ಘಟನೆ ಉಂಟಾಗಿದೆ. ಮನೆಯ ವಿದ್ಯುತ್‌ ಮೀಟರ್‌ ಬಾಕ್ಸ್‌ ಹಾಗೂ ಇನ್ನಿತರ ಉಪಕರಣಗಳಿಗೆ ಹಾನಿ ಸಂಭವಿಸಿದೆ.ಬೋರುಗುಡ್ಡೆ ನಿವಾಸಿ ಇಬ್ರಾಹಿಂ ಡಿ.ಎಚ್‌. ಅವರ ಮನೆಯ ಗೋಡೆಗೆ ಸಿಡಿಲು ಬಡಿದು ನಷ್ಟವುಂಟಾಗಿದೆ.ಈ ವೇಳೆ ಮನೆಯಲ್ಲಿ ಇಬ್ರಾಹಿಂ ಹಾಗೂ ಅವರ ಪತ್ನಿ ಮತ್ತು ಮಕ್ಕಳು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

See also  ಸುಳ್ಯ:ಚೆನ್ನಕೇಶವ ದೇವರ ವೈಭವದ ರಥೋತ್ಸವ,ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget