ನ್ಯೂಸ್ ನಾಟೌಟ್: ಬ್ಲಾಕ್ ಬಾಸ್ಟರ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿ ಹಲವು ದಾಖಲೆಗಳನ್ನು ಪುಡಿಗಟ್ಟಿ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾಗಳಲ್ಲಿ ಕನ್ನಡದ ಕೆಜಿಎಫ್ ಸಿನಿಮಾ ಕೂಡ ಒಂದು. ಈ ಸಿನಿಮಾದ ಮಧ್ಯಂತರದಲ್ಲಿ ಬರುವ ಅಜ್ಜನ ಪಾತ್ರ ನಿಮಗೆಲ್ಲ ನೆನಪು ಇದ್ದೇ ಇರುತ್ತದೆ. ಏಕೆಂದರೆ ಇಡೀ ಸಿನಿಮಾ ಕಥೆ ಇಲ್ಲಿಂದ ತಿರುವು ಪಡೆದುಕೊಳ್ಳುತ್ತದೆ. ಅಂತಹ ಪಾತ್ರದಲ್ಲಿ ಯಶ್ ಜತೆ ನಟಿಸಿದ ಹಿರಿಯಜ್ಜ ಇದೀಗ ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೃಷ್ಣಾಜೀ ರಾವ್ ಅವರಿಗೆ 70 ವರ್ಷ ವಯಸ್ಸಾಗಿದೆ. ಕೆಜಿಎಫ್ ಸಿನಿಮಾದಲ್ಲಿ ತಾತನ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ಕೃಷ್ಣಾಜಿ ರಾವ್, ಕೆಜಿಎಫ್ ತಾತ ಎಂದೇ ಖ್ಯಾತಿ ಪಡೆದರು, ನಂತರ ಸಾಕಷ್ಟು ಸಿನಿಮಾಗಳು ಇವರನ್ನು ಅರಸಿಕೊಂಡು ಬಂದವು ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದಾರೆ ಈ ಸಿನಿಮಾದಲ್ಲಿ ಕೌಬಾಯ್ ಗೆಟಪ್‌ನಲ್ಲಿ ಕಾಣಿಸಿಕೊಂಡ ಕೃಷ್ಣಾಜಿ ರಾವ್, 70ನೇ ವಯಸ್ಸಲ್ಲಿ ಹೀರೋ ಆಗುವ ಕನಸನ್ನೂ ಈಡೇರಿಸಿಕೊಂಡಿದ್ದರು. ಬುಧವಾರ ತಡರಾತ್ರಿ ಮನೆಯಲ್ಲಿ ಸುಸ್ತಾಗಿ ಕೃಷ್ಣಾಜಿ ರಾವ್ ಬಿದ್ದರಂತೆ. ಕುಟುಂಬಸ್ಥರು ಮಧ್ಯರಾತ್ರಿ 2 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ.