Uncategorized

ಶಾಸಕ ಅಪ್ಪಚ್ಚು ರಂಜನ್ ಗೆ ಸಚಿವ ಸ್ಥಾನ ನೀಡಲು ಆಗ್ರಹ

ಮಡಿಕೇರಿ: ಸತತವಾಗಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಮಂಡೇಪಂಡ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕು, ಈ ಮೂಲಕ ಭಾರತೀಯ ಜನತಾ ಪಕ್ಷ ಕೊಡಗಿನ ಹಾಗೂ ಕೊಡವರ ಋಣ ತೀರಿಸಬೇಕಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ಒತ್ತಾಯಿಸಿವೆ.

ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣಪ್ಪ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅವರುಗಳು, ಕೊಡಗಿಗೆ ನಿರಂತರ ಮಂತ್ರಿ ಸ್ಥಾನ ಕೈತಪ್ಪುತಿದ್ದು, ಇದರೊಂದಿಗೆ ಕೊಡವ ಜನಾಂಗಕ್ಕೆ ಪ್ರತಿ ಬಾರಿಯೂ ಅನ್ಯಾಯವಾಗುತ್ತಿದೆ. ಈ ಬಾರಿ ಮಡಿಕೇರಿ ಕ್ಷೇತ್ರದ ಶಾಸಕ ಹಾಗೂ ಕೊಡವ ಜನಾಂಗದ ಪ್ರತಿನಿಧಿಯೂ ಆಗಿರುವ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಅವರಿಗೆ ಕೊಡಗಿನ ಉಸ್ತುವಾರಿಯನ್ನು ನೀಡಬೇಕು ಎಂದು ಎಂದು ಒತ್ತಾಯಿಸಿದ್ದಾರೆ.

Related posts

ವಿವಾಹಿತ ಮಹಿಳೆಗೆ ಹೈಸ್ಕೂಲ್‌ ಸಹಪಾಠಿಗಳ ಲೈಂಗಿಕ ಕಿರುಕುಳ..! ನೊಂದ ಮಹಿಳೆ ಮಾಡಿದ್ದೇನು..?

ಸಂಪಾಜೆ: ವಿದ್ಯೆ ಕಲಿಸಿದ ಸರಕಾರಿ ಕನ್ನಡ ಶಾಲೆಯನ್ನು ಮರೆಯದ ಹಳೆ ವಿದ್ಯಾರ್ಥಿಗಳು

ಗವಿಸಿದ್ದೇಶ್ವರ ಶ್ರೀಗಳ ವತಿಯಿಂದ 5000 ಮಕ್ಕಳಿಗೆ ಪಾನಿಪುರಿ..! ಮಠದಲ್ಲೇ ತಯಾರಿಸಿ ಬಡಿಸಿದ ಸ್ವಾಮೀಜಿ