ಕರಾವಳಿ

ಗಾಳಿಯಲ್ಲಿ ಗಿರಗಿರನೆ ತಿರುಗಿದ ವಿಂಡೀಸ್ ಕ್ರಿಕೆಟಿಗ, ವಿಕೆಟ್ ಸಿಕ್ಕ ಸಂಭ್ರಮವನ್ನು ವ್ಯಕ್ತಪಡಿಸಿದ ರೀತಿಗೆ ಬೆರಗಾದ ಕ್ರಿಕೆಟ್ ಪ್ರೇಮಿಗಳು, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ವೆಸ್ಟ್ ಇಂಡೀಸ್ ಆಟಗಾರ ಕೆವಿನ್ ಸಿಂಕ್ಲೇರ್ ಟೆಸ್ಟ್ ಕ್ರಿಕೆಟ್​ನಲ್ಲಿ ವಿಕೆಟ್ ಖಾತೆ ತೆರೆದಿದ್ದಾರೆ. ಬ್ರಿಸ್ಬೇನ್​ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್​ ಸಿಗುತ್ತಿದ್ದಂತೆ ಕೆವಿನ್ ಅತ್ಯಾಕರ್ಷಕವಾಗಿ ಸಂಭ್ರಮಿಸಿದ್ದಾರೆ. ಹೊನಲು ಬೆಳಕಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಮೊದಲ ಇನಿಂಗ್ಸ್​ನಲ್ಲಿ 311 ರನ್ ಪೇರಿಸಿ ವೆಸ್ಟ್ ಇಂಡೀಸ್ ತಂಡ ಆಲೌಟ್ ಆಗಿದೆ.

131 ಎಸೆತಗಳನ್ನು ಎದುರಿಸಿದ ಉಸ್ಮಾನ್ ಖ್ವಾಜಾ 10 ಫೋರ್​ಗಳೊಂದಿಗೆ 75 ರನ್ ಬಾರಿಸಿದ್ದರು. ಈ ವೇಳೆ ದಾಳಿಗಿಳಿದ ಸ್ಪಿನ್ನರ್ ಕೆವಿನ್ ಸಿಂಕ್ಲೇರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಖ್ವಾಜಾ ಸ್ಲಿಪ್​ನಲ್ಲಿ ಕ್ಯಾಚಿತ್ತು ಹೊರ ನಡೆದರು. ಈ ವಿಕೆಟ್​ ಸಿಗುತ್ತಿದ್ದಂತೆ ಕೆವಿನ್ ಸಿಂಕ್ಲೇರ್ ಕಾರ್ಟ್ ವೀಲ್ ಬ್ಯಾಕ್-ಫ್ಲಿಪ್ ಮಾಡಿ ಸಂಭ್ರಮಿಸಿದ್ದರು. ಈ ಅತ್ಯಾಕರ್ಷಕ ಸಂಭ್ರಮಕ್ಕೆ ಬ್ರಿಸ್ಬೇನ್ ಪ್ರೇಕ್ಷಕರು ಕೂಡ ತಲೆದೂಗಿದರು. ಇದೀಗ ಕೆವಿನ್ ಸಿಂಕ್ಲೇರ್ ಅವರ ಬ್ಯಾಕ್-ಫ್ಲಿಪ್ ಸೆಲೆಬ್ರೇಷನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

Related posts

ಸುಳ್ಯ: 7,000 ರೂ. ಮೌಲ್ಯದ ಸಿಗರೇಟ್, 10,000 ರೂ. ನಗದು ದೋಚಿ ಕತ್ತಲಲ್ಲಿ ಕಳ್ಳರು ಪರಾರಿ..! ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿಗಳಿಗೆ ನುಗ್ಗಿ ಕಳ್ಳರ ಕೈ ಚಳಕ..!

ಮಂಗಳೂರು: ಅಪ್ರಾಪ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ..! ರಿಕ್ಷಾ ಚಾಲಕ ರಝೀನ್ ಬಾಡಿಗೆ ಮನೆಗೆ ಕರೆದೊಯ್ದಿದ್ದ ಎಂದ ಯುವತಿ!

ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್..! ವಾಶ್​ ರೂಮ್ ಪರಿಶೀಲನೆ ಮಾಡಿದ ಪೊಲೀಸರಿಗೆ ಕಾದಿತ್ತು ಶಾಕ್!