ಕ್ರೈಂ

ಗಂಟಲಲ್ಲಿ ಮಾಂಸದ ಚೂರು ಸಿಲುಕಿ ಎಂಎಸ್ಸಿ ವಿದ್ಯಾರ್ಥಿನಿ ಸಾವು..!

ನ್ಯೂಸ್ ನಾಟೌಟ್: ಊಟ ಮಾಡುವಾಗ ಗಂಟಲಲ್ಲಿ ಮಾಂಸದ ಚೂರು ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎಂ ಎಸ್ಸಿ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ, ಮೃತಪಟ್ಟವರು ಫಾತಿಮಾ ಹನಾನ್ (22 ) ಎಂದು ಗುರುತಿಸಲಾಗಿದೆ.

ಫಾತಿಮಾ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಮಾಂಸದ ತುಂಡು ಗಂಟಲಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ಅವರನ್ನು ಪೆರಿಂತಲ್ಮಣ್ಣಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಾಯಿ, ಗಂಡ, ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಮಂಗಳೂರು : ಕಳವಾದ 7 ಮೊಬೈಲ್ ಪೋನ್‌ಗಳು ೨೪ ಗಂಟೆಯೊಳಗೆ ಪತ್ತೆ! ಮೊಬೈಲ್ ಪತ್ತೆಗೆ ಬಂದಿದೆ ಹೊಸ ಪೋರ್ಟಲ್ !

ಕೊಡಗು: ಹಳೆ ದ್ವೇಷ ಹಿನ್ನೆಲೆ ಕೋವಿಯಿಂದ ಗುಂಡು ಹಾರಿಸಿ ಕೊಲೆ! ನಿಗೂಢ ಸಾವಿನ ಹಿಂದಿದೆಯಾ ರಹಸ್ಯ!

ಕೆಎಸ್ಆರ್‌ಟಿಸಿ ಬಸ್ಸನ್ನೇ ಕದ್ದು ಎಸ್ಕೇಪ್ ಆದ ಖದೀಮರು!