ಕಾಸರಗೋಡುಕ್ರೈಂವೈರಲ್ ನ್ಯೂಸ್

ಕೇರಳ: ದೇಗುಲ ಉತ್ಸವದ ವೇಳೆ ರೊಚ್ಚಿಗೆದ್ದ ಆನೆ..! ಸೊಂಡಿಲಿನಿಂದ ವ್ಯಕ್ತಿಯನ್ನು ಎಸೆದು ಆಕ್ರೋಶ, 20ಕ್ಕೂ ಹೆಚ್ಚು ಮಂದಿಗೆ ಗಾಯ, ಇಲ್ಲಿದೆ ವಿಡಿಯೋ

233

ನ್ಯೂಸ್ ನಾಟೌಟ್ : ಕೇರಳದ ಮಲಪ್ಪುರಂನಲ್ಲಿನ ದೇಗುಲವೊಂದರ ಧಾರ್ಮಿಕ ಉತ್ಸವದಲ್ಲಿದ್ದ ಆನೆಯೊಂದು ದಾಳಿ ಮಾಡಿದ ಪರಿಣಾಮ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಕೇರಳದ ಮಲಪ್ಪುರಂನ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ಈ ಘಟನೆ ನಡೆದಿದ್ದು. ದೇಗುಲ ಉತ್ಸವಕ್ಕಾಗಿ ಸಿಂಗಾರಗೊಂಡು ನಿಂತಿದ್ದ ಆನೆಯೊಂದು ಏಕಾಏಕಿ ಆಕ್ರೋಶಗೊಂಡು ತನ್ನ ಮುಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದೆ.

ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿಕೊಂಡ ಆನೆ ಏಕಾಏಕಿ ಬಟ್ಟೆ ಒಗೆದಂತೆ ನೆಲಕ್ಕೆ ಒಗೆದಿದೆ. ಬಳಿಕ ಅಲ್ಲಿ ನೆರೆದಿದ್ದ ಜನರತ್ತ ಆನೆ ನುಗ್ಗಿದ್ದು ಈ ವೇಳೆ ಕನಿಷ್ಟ 20 ಮಂದಿ ನೂಕುನುಗ್ಗಲು ಉಂಟಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇಲ್ಲಿನ ಬಿಪಿ ಅಂಗಡಿಯಲ್ಲಿರುವ ಯಾಹೂ ತಂಗಳ್ ದೇಗುಲದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವಗಳು ನಡೆಯುತ್ತಿತ್ತು. ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆದ ಆನೆಗಳನ್ನು ಕರೆಸಲಾಗಿತ್ತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಆದರೆ ಕಾರ್ಯಕ್ರಮ ಮುಗಿಯುವ ಕೆಲವೇ ಗಂಟೆಗಳ ಮೊದಲು ಪಕ್ಕೋತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆಯು ದಿಢೀರ್ ಆಕ್ರೋಶಗೊಂಡು ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಗಾಬರಿಗೊಂಡ ಜನರು ಓಡಲು ಪ್ರಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Click

https://newsnotout.com/2025/01/isro-narayanan-appointeed-as-space-secretory-as-well-as-chief/
https://newsnotout.com/2025/01/hmpv-viras-issue-health-department-kannada-news-d/
https://newsnotout.com/2025/01/udupi-fish-theft-kannada-news-at-night-viral-news/
https://newsnotout.com/2025/01/kannada-news-actress-honey-rose-viral-post-business-man-arrested/
See also  ಗೂನಡ್ಕ: ಭೀಕರ ಬೈಕ್ ಅಪಘಾತ, ಹಸುವಿಗೆ ಗುದ್ದಿದ ಬೈಕ್, ಹಸು ಸ್ಥಳದಲ್ಲೇ ಸಾವು, ಬೈಕ್ ಸವಾರನಿಗೆ ಗಂಭೀರ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget