ಕ್ರೈಂ

ಗೂನಡ್ಕ: ಭೀಕರ ಬೈಕ್ ಅಪಘಾತ, ಹಸುವಿಗೆ ಗುದ್ದಿದ ಬೈಕ್, ಹಸು ಸ್ಥಳದಲ್ಲೇ ಸಾವು, ಬೈಕ್ ಸವಾರನಿಗೆ ಗಂಭೀರ

630
Spread the love
ಸತ್ತು ಬಿದ್ದಿರುವ ಹಸು

ಸುಳ್ಯ: ಗೂನಡ್ಕ ಸಮೀಪ ಸುಳ್ಯದಿಂದ ಕೊಯನಾಡಿಗೆ ಹೋಗುತ್ತಿದ್ದ ಬೈಕ್ ದನಕ್ಕೆ ಡಿಕ್ಕಿ ಆಗಿ ದನ ಸ್ಥಳದಲ್ಲಿ ಸಾವಿಗೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಕೊಯಿನಾಡು ಪರಿಸರದ ಸವಾದ್ ಹಾಗೂ ಮಿರ್ಷದ್ ಎಂಬ ಇಬ್ಬರು ಯುವಕರು ಮಂಗಳೂರಿಗೆ ಹೋಗಿದ್ದು ಸಂಜೆ ಮರಳಿ ಬರುವ ಸಂದರ್ಭದಲ್ಲಿ ಗೂನಡ್ಕ ಸಮೀಪ ಘಟನೆ ಸಂಭವಿಸಿದೆ. ಅಪಘಾತದಿಂದ ಸವಾದ್ ರವರಿಗೆ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮಿರ್ಸದ್ ರವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

See also  ಜಾಮೀನು ಸಿಗುತ್ತಿದ್ದಂತೆ ಸರ್ಜರಿ ಇಲ್ಲದೆಯೇ ದರ್ಶನ್ ಡಿಸ್ಚಾರ್ಜ್..! ಆಸ್ಪತ್ರೆಯಿಂದ ​ಪತ್ನಿಯ ಮನೆಗೆ ತೆರಳಿದ ದರ್ಶನ್
  Ad Widget   Ad Widget   Ad Widget   Ad Widget   Ad Widget   Ad Widget