Latestಕೇರಳಕ್ರೈಂವಿಡಿಯೋವೈರಲ್ ನ್ಯೂಸ್

ಕೇರಳ: ಕಂಪನಿಯ ಟಾರ್ಗೆಟ್ ಪೂರ್ತಿಗೊಳಿಸದ್ದಕ್ಕೆ ನಾಯಿಗಳಂತೆ ಮೊಣಕಾಲಿನಲ್ಲಿ ನಡೆಸಿ ವಿಚಿತ್ರ ಶಿಕ್ಷೆ..! ತನಿಖೆಗೆ ಆದೇಶಿಸಿದ ಕಾರ್ಮಿಕ ಇಲಾಖೆ..!

627

ನ್ಯೂಸ್ ನಾಟೌಟ್: ಖಾಸಗಿ ಮಾರ್ಕೆಟಿಂಗ್ ಕಂಪನಿಯೊಂದು ಕಡಿಮೆ ಕ್ಷಮತೆಯ ಸಿಬ್ಬಂದಿಯನ್ನು ಸರಪಳಿ ಬಿಗಿದ ನಾಯಿಗಳಂತೆ ಮೊಣಕಾಲಿನಲ್ಲಿ ನಡೆಸಿದ ಮತ್ತು ನೆಲದಲ್ಲಿ ಹರಡಿದ ನಾಣ್ಯಗಳನ್ನು ನೆಕ್ಕುವಂತೆ ಬಲವಂತಪಡಿಸಿ ಶಿಕ್ಷಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಕೇರಳದ ಕೊಚ್ಚಿನ್ ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಟಿವಿ ಚಾನಲ್‍ಗಳಲ್ಲಿ ಈ ಶಿಕ್ಷೆಯ ದೃಶ್ಯತುಣುಕುಗಳು ಪ್ರಸಾರವಾದ ಬೆನ್ನಲ್ಲೇ ಕೇರಳ ಕಾರ್ಮಿಕ ಇಲಾಖೆ ಈ ಅಮಾನವೀಯ ಕಿರುಕುಳದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.

ಘಟನೆಯ ಬಗ್ಗೆ ತನಿಖೆ ನಡೆಸಿ, ತಕ್ಷಣ ವರದಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ರಾಜ್ಯ ಕಾರ್ಮಿಕ ಸಚಿವ ವಿ.ಶಿವನ್‍ ಕುಟ್ಟಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾರುಕೋಲು ಹಿಡಿದ ವ್ಯಕ್ತಿಯೊಬ್ಬ ಮತ್ತೊಬ್ಬನನ್ನು ನಾಯಿಯನ್ನು ಹೋಲುವಂತೆ ಮೊಣಕಾಲಿನಲ್ಲಿ ತೆವಳಲು ಬಲವಂತಪಡಿಸುತ್ತಿರುವ ದೃಶ್ಯಾವಳಿ ಪ್ರಸಾರವಾಗಿತ್ತು.

ಮಾರ್ಕೆಟಿಂಗ್ ನಲ್ಲಿ ಗುರಿ ತಲುಪದ ಸಿಬ್ಬಂದಿಗೆ ಆ ಖಾಸಗಿ ಕಂಪನಿಯ ಆಡಳಿತ ಮಂಡಳಿ ಈ ಶಿಕ್ಷೆ ವಿಧಿಸಿತ್ತು ಎಂದು ಟಿವಿ ಚಾನಲ್‍ ಗೆ ಮಾಹಿತಿ ನೀಡಲಾಗಿತ್ತು. ಪೆರಂಬವೂರು ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಹಾಗೂ ಮಾಲಕರು ಈ ಆರೋಪ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇದು ಆಘಾತಕಾರಿ ಎಂದು ಬಣ್ಣಿಸಿರುವ ಸಚಿವ ಶಿವನ್‍ಕುಟ್ಟಿ, ಕೇರಳದಂತಹ ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಇದನ್ನು ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.

ಇದನ್ನೂ ಓದಿಬೀಳ್ಕೊಡುಗೆ ಸಮಾರಂಭದಂದು ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು..! ವಿಡಿಯೋ ವೈರಲ್ 

ದೇಶದ ಮೊದಲ ಸಮುದ್ರ ಸೇತುವೆ ಇಂದು(ಎ.6) ಉದ್ಘಾಟನೆ, ರಾಮನವಮಿಯಂದು 550 ಕೋಟಿ ರೂ. ವೆಚ್ಚದ ವಿಶಿಷ್ಟ ಸೇತುವೆ ಮೋದಿಯಿಂದ ಲೋಕಾರ್ಪಣೆ

See also  ದರ್ಶನ್‌ ಪ್ರಕರಣ: ಡಾ.ಶಿವರಾಜ್ ಕುಮಾರ್ ಮೊದಲ ಪ್ರತಿಕ್ರಿಯೆ..! ಈ ಘಟನೆಯ ಬಗ್ಗೆ ಬೇಸರವಿದೆ ಎಂದು ಅಸಮಾಧಾನ ಹೊರಹಾಕಿದ ಶಿವಣ್ಣ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget