ಕ್ರೈಂದೇಶ-ಪ್ರಪಂಚದೇಶ-ವಿದೇಶ

ಕೇರಳ: ಐಸ್‌ ಕ್ರೀಂ ಆಕೃತಿಯ ಬಾಂಬ್ ಗಳು ಸ್ಟೋಟ..! ದೇಗುಲ ಉತ್ಸವದಲ್ಲಿ ಸಿಪಿಎಂ-ಬಿಜೆಪಿ ಕಾರ್ಯಕರ್ತರ ನಡುವೆ ಜಗಳ..!

ನ್ಯೂಸ್ ನಾಟೌಟ್: ರಸ್ತೆಗೆ ಎಸೆಯಲಾದ 2 ಐಸ್‌ ಕ್ರೀಂ ಬಾಂಬ್‌ಗಳು ಸ್ಫೋಟಗೊಂಡ ಘಟನೆ ಕೇರಳದ ಕಣ್ಣೂರಿನ ಪರಿಯಾರಂನ ಅಂಚರಕಂಡಿಯಲ್ಲಿ ಎ.14 ಮುಂಜಾನೆ ನಡೆದಿದೆ. ಬಾಂಬ್‌ ಅನ್ನು ಐಸ್‌ಕ್ರೀಂ ಕಂಟೇನರ್‌ ರೂಪದಲ್ಲಿ ತಯಾರಿಸಿದ್ದು, ಯಾರಿಗೂ ಅನುಮಾನ ಬಾರದಿರಲು ಈ ರೀತಿ ತಯಾರಿಸಲಾಗಿದೆ. ರಸ್ತೆಗೆ ಎಸೆದ 3 ಐಸ್‌ ಕ್ರೀಮ್‌ ಆಕೃತಿಯ ಬಾಂಬ್‌ಗಳಲ್ಲಿ 2 ಬಾಂಬ್‌ಗಳು ಸ್ಫೋಟಗೊಂಡಿದ್ದು, ಮತ್ತೊಂದು ಬಾಂಬ್‌ ಸ್ಫೋಟಗೊಳ್ಳುವುದರ ಒಳಗೆ ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದು ಬಾಂಬ್‌ ನಿಷ್ಕ್ರಿಯಗೊಳಿಸಿದೆ.

ಘಟನೆ ನಡೆಸಿದ್ದು ಬೆಳಗಿನ ಜಾವವಾದ ಕಾರಣ ಬಾಂಬ್‌ ಎಸೆದವರು ಯಾರೆಂದು ಗುರುತಿಸಲಾಗಿಲ್ಲ. ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದಿನ ದಿನ ಪಟ್ಟಮಕವಿಯ ದೇಗುಲ ಉತ್ಸವದಲ್ಲಿ ಸಿಪಿಎಂ-ಬಿಜೆಪಿ ಕಾರ್ಯಕರ್ತರ ನಡುವೆ ಜಗಳವಾಗಿತ್ತು. ಇದರ ಬೆನ್ನಲ್ಲೆ ಈ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Related posts

ಅರಂತೋಡಿನಲ್ಲಿ ಕಾರುಗಳ ನಡುವೆ ಭೀಕರ ಅಪಘಾತ

ನಿಶ್ಚಿತಾರ್ಥದ ರಿಂಗ್ ಗಾಗಿ ಪ್ರಾಣವನ್ನೇ ಕಳೆದುಕೊಂಡನಾ ಯುವಕ? ಅಷ್ಟಕ್ಕೂ ಅಂದು ಸ್ನಾನಕ್ಕೆ ತೆರಳಿದ್ದ ಯುವಕನ ಬಾಳಲ್ಲಿ ನಡೆದದ್ದೇನು?

ಸುಳ್ಯದಲ್ಲಿ ಡ್ರಗ್ಸ್ ಜಾಲ ಬೇಧಿಸಿದ ಪೊಲೀಸರು!! ಅಮಾಯಕರಿಗೆ ಮಾದಕ ವಸ್ತು ನೀಡುತ್ತಿದ್ದವ ಈಗ ಕಂಬಿ ಹಿಂದೆ!