ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ನಾಳೆ(ಮೇ.10)ಯಿಂದ ಕೇದಾರನಾಥ ದರ್ಶನ ಪ್ರಾರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಉತ್ತರಾಖಂಡದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೇತ್ರಿ ದೇಗುಲಗಳು ಶುಕ್ರವಾರದಿಂದ (ಮೇ 10) ಭಕ್ತರಿಗಾಗಿ ತೆರೆಯಲಿವೆ. ಪ್ರತೀ ವರ್ಷ ಹಿಮಾಲಯದಲ್ಲಿ ನೆಲೆ ನಿಂತಿರುವ ಮಹಾದೇವನ ಈ ದೇಗುಲಗಳನ್ನು ಹಿಮಪಾತದಿಂದಾಗಿ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಬೇಸಿಗೆಯ ಆರಂಭದಲ್ಲಿ ಮತ್ತೆ ತೆರೆಯಲಾಗುತ್ತದೆ.

ಕೇದಾರನಾಥ ಹಾಗೂ ಯಮುನೇತ್ರಿ ದೇಗುಲಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುತ್ತದೆ. ಗಂಗೋತ್ರಿ ದೇಗುಲ ಮಧ್ಯಾಹ್ನ 12.20ಕ್ಕೆ ತೆರೆಯಲಿದೆ ಎಂದು ಸಮಿತಿ ತಿಳಿಸಿದೆ. ಕೇದಾರನಾಥ ಧಾಮ ಯಾತ್ರೆಗೆ ನೋಂದಾಯಿಸಲು ಭಕ್ತರು badrinath-kedarnath.gov.in ವೆಬ್‌ಸೈಟ್ ಅಥವಾ https://uttarakhandtourism.gov.in/ ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ಕೇದಾರನಾಥ ಧಾಮಕ್ಕೆ ಭೇಟಿ ನೀಡಬಹುದು. ಚಾರ್‌ಧಾಮದ ಮತ್ತೊಂದು ದೇಗುಲ ಬದರಿನಾಥ, ಮೇ 12ರಂದು ಬೆಳಿಗ್ಗೆ ತೆರೆಯಲಿದೆ. ಕೇದಾರನಾಥ ದೇಗುಲವನ್ನು 20 ಕ್ವಿಂಟಲ್‌ ಹೂವುಗಳಿಂದ ಸಿಂಗರಿಸಲಾಗುವುದು ಎಂದು ಬದರಿನಾಥ–ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಬದುಕಿರುವಾಗಲೇ ಅಜ್ಜಿಗೆ ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳು! ತಹಶಿಲ್ದಾರ್ ಬಗ್ಗೆ ಜನರು ಹೇಳೋದೇನು?

ಮಾಜಿ ಸಚಿವ ಹೆಚ್.ಡಿ ರೇವಣ್ಣನಿಗೆ ನ್ಯಾಯಂಗ ಬಂಧನ, ಮುಂದಿನ 7 ದಿನ ಜೈಲುವಾಸ

ಕೋಟ, ಚೌಟ ಮುನ್ನಡೆ..! ಉಡುಪಿ, ದಕ್ಷಿಣ ಕನ್ನಡದಲ್ಲಿ ರಂಗೇರಿದ ಮತ ಎಣಿಕೆ