Uncategorized

ಕೊರಗಜ್ಜನ ಸನ್ನಿಧಿಯಲ್ಲಿ‘ಕಾಟೇರ’ ಡೈರೆಕ್ಟರ್ ತರುಣ್..!,ಚಿತ್ರ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಓಡೋಡಿ ಬಂದ ನಿರ್ದೇಶಕ..!

ನ್ಯೂಸ್‌ ನಾಟೌಟ್‌ : ತುಳುನಾಡಿನ ಪವರ್‌ಫುಲ್‌ ದೈವಗಳಲ್ಲಿ ಕೊರಗಜ್ಜ ದೈವ ಕೂಡ ಒಂದು.ಅಜ್ಜ ಎಂದು ಕರೆದರೆ ಭಕ್ತರ ಕಷ್ಟವನ್ನು ನಿವಾರಿಸಲು ಅಜ್ಜ ಓಡೋಡಿ ಬರುತ್ತಾರೆ ಅನ್ನೋದು ಭಕ್ತರ ನಂಬಿಕೆ.ಅದೆಷ್ಟೋ ಭಕ್ತರು ಅಜ್ಜನ ಬಳಿ ಬಂದು ತಮ್ಮ ಕಷ್ಟಗಳನ್ನು ಬೇಡಿಕೊಂಡು ನಿವಾರಿಸಿಕೊಂಡಿರೋದ್ರ ಬಗ್ಗೆ ತುಂಬಾ ನಿದರ್ಶನಗಳಿವೆ.ಇದೀಗ ಇತ್ತೀಚೆಗಷ್ಟೇ ಕಾಟೇರ ಸಿನಿಮಾ ನಾಯಕಿ ಆರಾಧನಾ ರಾಮ್‌ ಅವರ ತಾಯಿ ಹಾಗೂ ಪ್ರಸಿದ್ಧ ನಟಿ ಮಾಲಾಶ್ರೀ ಅವರು ಕೊರಗಜ್ಜನ ಸನ್ನಿಧಿಗೆ ಆಗಮಿಸಿದ್ದರು. ಇದರ ಬೆನ್ನಲ್ಲೇ ಕಾಟೇರ ಸಿನಿಮಾ ನಿರ್ದೇಶಕರು ಅಜ್ಜನ ಸಾನಿಧ್ಯಕ್ಕೆ ಬಂದು ಆಶೀರ್ವಾದ ಪಡೆದಿದ್ದಾರೆ.

ದರ್ಶನ್ ನಟನೆಯ ಕಾಟೇರ ಅದ್ಭುತವಾಗಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಆದಿಸ್ಥಳ ಸ್ವಾಮಿ ಕೊರಗಜ್ಜ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಚಿತ್ರ ಯಶಸ್ಸುಗಳಿಸಿದ್ದಕ್ಕಾಗಿ ಅವರು ಈ ಪೂಜೆ ಸಲ್ಲಿಸಿದ್ದಾರೆ.ಕೇವಲ ಮಂಗಳೂರಿನಲ್ಲಿರುವ ಕೊರಗಜ್ಜನ ಸನ್ನಿಧಾನಕ್ಕೆ ಮಾತ್ರವಲ್ಲ, ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮುಂದಿನ ತಮ್ಮ ಕಾರ್ಯಗಳಿಗೆ ಯಶಸ್ಸು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

Related posts

ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್‌ಗೆ ಮದ್ವೆ ಅಗಿದ್ಯಾ?;ವೈರಲ್ ಫೋಟೋ ನೋಡಿ ನೆಟ್ಟಿಗರು ಏನಂದ್ರು?

ಬೀಡಿ ಕೊಡಲೆಂದು ಹೋಗುವಾಗ ರೈಲಿನಡಿಗೆ ಸಿಲುಕಿ ಇಬ್ಬರು ಮಹಿಳೆಯರ ದಾರುಣ ಸಾವು

ಗವಿಸಿದ್ದೇಶ್ವರ ಶ್ರೀಗಳ ವತಿಯಿಂದ 5000 ಮಕ್ಕಳಿಗೆ ಪಾನಿಪುರಿ..! ಮಠದಲ್ಲೇ ತಯಾರಿಸಿ ಬಡಿಸಿದ ಸ್ವಾಮೀಜಿ