ದೇಶ-ಪ್ರಪಂಚ

ಕಡೆಗೂ ಕಾರ್ತಿಕ್​ ಕನಸು ನನಸಾಯಿತು..!ತನಗೆ ಬಂದ ಹಣವನ್ನು ಏನು ಮಾಡಿದ್ರು ನೋಡಿ..!ಪ್ರೀತಿಯ ತಾಯಿಗೆ ದೇಗುಲ ಕಟ್ಟಿ ಕೊಡ್ತಾರಾ ಸೀಸನ್​ 10ರ ವಿಜೇತ?

ನ್ಯೂಸ್‌ ನಾಟೌಟ್‌ : ಬಿಗ್‌ಬಾಸ್‌ ಕನ್ನಡ ಸೀಸನ್​ 10ರ ಪಟ್ಟ ಸ್ವೀಕರಿಸಿದ ಕಾರ್ತಿಕ್ ಮಹೇಶ್‌, ಬಹುಮತಗಳಿಂದ ರಾಜ್ಯದ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ವಿನ್ನರ್ ಆಗಿ ಹೊರಹೊಮ್ಮುತ್ತಿದ್ದಂತೆ ಸಂತಸದಿಂದ ತೇಲಾಡಿದ ಕಾರ್ತಿಕ್,​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಮೊದಲ ದಿನದಿಂದಲೂ ಹೇಳಿಕೊಂಡು ಬಂದಿದ್ದ ಒಂದು ಕನಸ್ಸುನ್ನು ನನಸಾಗಿಸುವತ್ತ ಹೆಜ್ಜೆ ಹಾಕಿದ್ದಾರೆ.

ಮನೆಯಲ್ಲಿ ಕೊನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಹೀಗಾಗಿ ಸಹಜವಾಗಿಯೇ ಸ್ಪರ್ಧಿಗಳ ಎದೆಯಲ್ಲಿ ಢವ , ಢವ, ಯಾರು ಗೆಲ್ತಾರೆ ಅನ್ನೋ ತವಕ ಎದ್ದು ಕಾಣುತ್ತಿತ್ತು. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ನಂತರ ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆದುಕೊಂಡು ಬಂದರು. ಈ ವೇಳೆ ಮೂವರ ಪೈಕಿ ಸಂಗೀತಾ ಎಲಿಮಿನೇಟ್ ಆದ ಬಳಿಕ ಅಂತಿಮ ಹಣಾಹಣಿಯಲ್ಲಿ ಇದ್ದದ್ದು ಕೇವಲ ಕಾರ್ತಿಕ್ ಮತ್ತು ಪ್ರತಾಪ್.

ಎರಡು ಕೋಟಿಗೂ ಮೀರಿದ ಮತಗಳನ್ನು ಪಡೆದು ವಿಜೇತರಾದ ಕಾರ್ತಿಕ್​ ಮಹೇಶ್​ ಅವರಿಗೆ ನಂಬೋದಕ್ಕೂ ಅಸಾಧ್ಯವಾದ ಕ್ಷಣವದು. ಇದಕ್ಕಾಗಿ ತನ್ನ ಸಹ ಸ್ಪರ್ಧಿಗಳಿಗೆ, ಸುದೀಪ್ ಹಾಗೂ ಇಡೀ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಧನ್ಯವಾದ ತಿಳಿಸುವ ಮೂಲಕ ಭಾವುಕರಾದರು. ಅತ್ಯಂತ ಯಶಸ್ಸು ಕಂಡ ಹತ್ತನೇ ಐತಿಹಾಸಿಕ ಸೀಸನ್‌ನಲ್ಲಿ ಗೆಲುವು ದಾಖಲಿಸಿದ ಕಾರ್ತಿಕ್​ಗೆ ಬಿಗ್ ಬಾಸ್​ ವತಿಯಿಂದ ಐವತ್ತು ಲಕ್ಷ ರೂಪಾಯಿಗಳ ಜತೆಗೆ ಒಂದು ಮಾರುತಿ ಬ್ರೀಜಾ ಕಾರನ್ನು ಬಹುಮಾನವಾಗಿ ಕೊಡಲಾಯಿತು.

ಈ ಬಗ್ಗೆ ಮಾತನಾಡಿದ ಕಾರ್ತಿಕ್ ಈ ಹಿಂದಿನಿಂದಲೂ ಬಹಳ ಕಷ್ಟದಿಂದ ಬಂದಿದ್ದೇನೆ, ನನ್ನ ತಾಯಿ ಸಾಕಷ್ಟು ಒದ್ದಾಟಗಳನ್ನು ನೋಡಿದ್ದಾರೆ. ಈ ಕಾರ್ಯಕ್ರಮ ಗೆದ್ದರೇ ಅದರಿಂದ ಬರುವ ಹಣದಿಂದ ನನ್ನ ತಾಯಿಗೊಂದು ಪುಟ್ಟ ಮನೆ ಕಟ್ಟಿಕೊಡಬೇಕು ಎಂಬ ಆಸೆಯಿದೆ ಎಂದು ಹೇಳುತ್ತಿದ್ದರು. ಅದನ್ನು ಫಿನಾಲೆ ವೇದಿಕೆಯಲ್ಲಿಯೂ ಸಹ ಮನಬಿಚ್ಚಿ ಹೇಳಿಕೊಂಡಿದ್ದರು. ಅದರಂತೆಯೇ ಕಾರ್ತಿಕ್ ವಿಜೇತರಾಗುವ ಮೂಲಕ ತಮ್ಮ ಬಹುದಿನದ ಕನಸ್ಸನ್ನು ಈಗ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.ಸೀಸನ್​ 10ರ ಟ್ರೋಫಿ ಗೆದ್ದು ಬೀಗುತ್ತಿದ್ದಂತೆ ಕಾರ್ತಿಕ್​ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆಯಿಂದ ಭಾರೀ ಮೆಚ್ಚುಗೆಗಳು, ಅಭಿನಂದನೆಗಳು ವ್ಯಾಪಕವಾಗಿ ವ್ಯಕ್ತವಾಗಿವೆ. ತಮ್ಮ ಹುಟ್ಟೂರು ಮೈಸೂರಿನಲ್ಲೂ ಸಹ ಸಂಭ್ರಮ ಮನೆಮಾಡಿದೆ.

https://www.youtube.com/watch?v=1JnHTxLJRGA

Related posts

ಅಯ್ಯಪ್ಪ ಮಾಲಾಧಾರಿಗಳಿಗೆ ಇನ್ಮುಂದೆ ಉಚಿತ ಸಾರಿಗೆ ವ್ಯವಸ್ಥೆ, ವಿಶ್ವ ಹಿಂದೂ ಪರಿಷತ್ ಮನವಿಗೆ ಸುಪ್ರೀಂ ಒಪ್ಪಿಗೆ

18 ವರ್ಷಗಳ ಕಾಲ ದುಬೈ ಜೈಲಿನಲ್ಲಿದ್ದ ಭಾರತೀಯರು ಮರಳಿ ತವರಿಗೆ..! 25 ವರ್ಷಗಳ ಶಿಕ್ಷೆಯಿಂದ ಪಾರದದ್ದೇಗೆ..? ಇಲ್ಲಿದೆ ಭಾವನಾತ್ಮಕ ವಿಡಿಯೋ

ಆಫ್ಘಾನಿಸ್ತಾನಕ್ಕೆ ನೆರವು ನೀಡುವಂತೆ ಭಾರತೀಯರಲ್ಲಿ ಮನವಿ ಮಾಡಿದ ನಟ ಸೋನು ಸೂದ್ ಮನವಿ