ದೇಶ-ಪ್ರಪಂಚ

ಕರ್ನಾಟಕದಲ್ಲಿ ಭಾರತದ ಹುಲಿ ಸಂರಕ್ಷಣೆಯ ಯಶಸ್ಸಿನ ಕಾರ್ಯಕ್ರಮ, ಬಂಡೀಪುರದಲ್ಲಿ 3 ದಿನಗಳ ಸಫಾರಿ ನಡೆಸಲಿರುವ ನರೇಂದ್ರ ಮೋದಿ

ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಈಗಾಗಲೇ ಆರು ಬಾರಿ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಏಳನೇ ಬಾರಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ಏಪ್ರಿಲ್‌ 9 ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಸಫಾರಿ ನಡೆಸಲಿದ್ದಾರೆ.

ಹುಲಿಗಳ ಯೋಜನೆ 50 ವರ್ಷ ಪೂರೈಸಿದ ಆಚರಣೆ ಮತ್ತು ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ಜಾಗತಿಕವಾಗಿ ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 9 ರಂದು ಮೈಸೂರಿನಲ್ಲಿ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಮೂಲಗಳು ತಿಳಿಸಿವೆ.

ಹುಲಿಗಣತಿ ವರದಿ, ಹುಲಿ ಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ವರದಿ ಮತ್ತು ನಾಣ್ಯ ಸ್ಮರಣಿಯನ್ನು ಪ್ರಧಾನಿ ಮೋದಿ ಮೈಸೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ. ಮೈಸೂರಿನ ಕಾರ್ಯಕ್ರಮದ ನಂತರ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಟಿ ನೀಡಿ ಮೂರು ದಿನಗಳ ಸಫಾರಿ ನಡೆಸಲಿದ್ದಾರೆ ಎನ್ನಲಾಗಿದೆ.

Related posts

ರಾತ್ರಿಯಿಡೀ ಕಾರ್ಯಾಚರಣೆ; ಮೂವರು ಉಗ್ರರ ಹೊಡೆದುರುಳಿಸಿದ ಸೇನೆ

ಅಮೆರಿಕದಲ್ಲಿ ಜೋಂಬಿ ನಿಜವಾಗಿ ಬಿಟ್ಟಂತಿದೆ! ನಡು ರಸ್ತೆಯಲ್ಲೇ ಜನರಿಂದ ವಿಚಿತ್ರ ವರ್ತನೆ!

1 ವರ್ಷದಿಂದ ನಿರಂತರ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ..! ಆತನ ಹಿನ್ನೆಲೆ ಕಂಡು ಪೊಲೀಸರೇ ಶಾಕ್..!