ಕರಾವಳಿಬೆಂಗಳೂರು

ಅಂಗಡಿಯಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ ,ಗಂಭೀರ ಗಾಯಗೊಂಡಿದ್ದ ವ್ಯಕ್ತಿ ದುರಂತ ಅಂತ್ಯ

295

ನ್ಯೂಸ್ ನಾಟೌಟ್ : ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ ಆಗಿ ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಗರತ್ ಪೇಟೆ ಬೀದಿಯಲ್ಲಿ ನಡೆದಿದೆ.

ವಿಷ್ಣು ಮೃತ ದುರ್ದೈವಿ.ಜುವೆಲರಿ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ವಿಷ್ಣು ಮತ್ತು ಪತ್ನಿ ಚಿನ್ನವನ್ನು ಮೆಲ್ಟ್ ಮಾಡಲು ಆಕ್ಸಿಜನ್ ಮತ್ತು ಎಲ್‌ಪಿ ಜಿ ಬಳಕೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಹಲವು ವರ್ಷಗಳಿಂದ ಚಿನ್ನದ ಅಂಗಡಿ ಮಾಲೀಕರು ಇದನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.ಈ ಘಟನೆ ನಡೆದ ವೇಳೆ ಮಾಲೀಕರು ಹೊರಗೆ ಇದ್ದರು ಎನ್ನಲಾಗಿದೆ.

ಈಗ ಮಾಲಿಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.ಆಕ್ಸಿಜನ್ ಮತ್ತು ಎಲ್ ಪಿ ಜಿ ಬಳಕೆಗೆ ಪರವಾನಗೆ ಇದ್ಯಾ ಎಂದು ಪರಿಶೀಲನೆ‌ ನಡೆಸಲಾಗುತ್ತಿದೆ ಎನ್ನಲಾಗಿದೆ.ನಿನ್ನೆ ಪತ್ನಿ ಪತಿ ವಿಷ್ಣುವಿಗೆ ಊಟ ತೆಗೆದುಕೊಂಡು ಬಂದಿದ್ರು.ಊಟಕ್ಕೆ ಬರುವಾಗ ಆಕ್ಸಿಜನ್ ಆಪ್ ಮಾಡದೆ ವಿಷ್ಣು ಹಾಗೆ ಬಂದಿದ್ದ ಎನ್ನಲಾಗಿದೆ.

ಆಕ್ಸಿಜನ್ ಆನ್ ಮಾಡಿ ಊಟಕ್ಕೆ ಹೋದ ಬೆನ್ನಲ್ಲೆ ಪ್ರೆಶರ್ ಹೆಚ್ಚಾದ ಹಿನ್ನೆಲೆ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದ್ದು, ಆತನು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.ಈಗ ಈ ಘಟನೆಗೆ ಸಂಬಂಧಿಸಿದ ಪ್ರಕರಣ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

See also  ಕಡಬ: ಮೆದುಳಿನ ರಕ್ತ ಸ್ರಾವದಿಂದ  ಬಾಲಕಿ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget