ಕರಾವಳಿ

ಮಡಿಕೇರಿ: ಬೆಕ್ಕು, ನಾಯಿ, ಮೇಕೆ ಮರಿಗಳೇ ಇವುಗಳ ಟಾರ್ಗೆಟ್,ಮನೆಯೊಳಗೆ ನುಗ್ಗಿ ದಾಂಧಲೆ ನಡೆಸುತ್ತಿರುವ ವಾನರ ಸೇನೆ

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡಿಗೆ ಭಾಗದಲ್ಲಿ ಮಂಗಗಳ ಉಪಟಳ ಜೋರಾಗಿದೆ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಮೇಕೆ ಮುಂತಾದವುಗಳ ಮರಿಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿರುವ ಸುದ್ದಿ ವರದಿಯಾಗಿದೆ.

ಇತ್ತೀಚೆಗೆ ಕೂಡಿಗೆ ವ್ಯಾಪ್ತಿಯಲ್ಲಿ ಮಂಗಗಳ ಗುಂಪಿನ ಕಾಟಕ್ಕೆ ಸಾರ್ವಜನಿಕರು ಹೈರಾಣಾಗಿದ್ದಾರೆ.ಪ್ರತಿನಿತ್ಯ ಇಲ್ಲಿ ಮುಖ್ಯ ರಸ್ತೆಯಲ್ಲಿ ಅಡ್ಡಾಡುವ ಮಂಗಗಳ ಗುಂಪು ಕೂಡಿಗೆ ಸರ್ಕಲ್ ವ್ಯಾಪ್ತಿಯಲ್ಲಿನ ಹೋಟೆಲ್, ದಿನಸಿ ಅಂಗಡಿ ಹಾಗೂ ಬೇಕರಿಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಬೇಕರಿಗಳಿಗೆ ನುಗ್ಗುತ್ತಿರುವ ಕಪಿಗಳ ಗುಂಪು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಓಡುತ್ತಿವೆ ಮತ್ತು ಸಾರ್ವಜನಿಕರ ಮೇಲೂ ದಾಳಿ ಮಾಡುವುದು ಮಾತ್ರವಲ್ಲದೇ ಕಚ್ಚಿ ಗಾಯಗೊಳಿಸಿ ಬಿಡುತ್ತವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ವಾಸದ ಮನೆಗಳಿಗೂ ನುಗ್ಗಿ ಅಲ್ಲಿರುವ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದೆ.ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೆ ದಾಳಿ, ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಮೇಕೆ ಮುಂತಾದವುಗಳ ಮರಿಗಳ ಮೇಲೆ ದಾಳಿ ಮಾಡಿ ಪ್ರಾಣಕ್ಕೆ ಅಪಾಯವನ್ನುಂಟು ಮಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Related posts

ಸಂಪಾಜೆ: ಲಕ್ಷಾಂತರ ರೂ. ಹಣ ಸಾಗಿಸುತ್ತಿದ್ದ ವಾಹನ ವಶಕ್ಕೆ, ಚುನಾವಣಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ

ಕೆವಿಜಿ ಆಸ್ಪತ್ರೆಯ ರಕ್ತನಿಧಿ ಘಟಕದ ಅಧಿಕಾರಿ ನಿಧನ: ಹಲವರ ಬಾಳಿಗೆ ಬೆಳಕಾಗಿದ್ದ ಡಾ|ಮಹಂತದೇವ್ರು ಇನ್ನು ನೆನಪು ಮಾತ್ರ

ಸುಳ್ಯ; ಕೆ.ವಿ.ಜಿ. ಕಾನೂನು ಮಹಾವಿದ್ಯಾಲದಲ್ಲಿ ಅಂತಿಮ ಕಾನೂನು ಪದವಿ ವಿದ್ಯಾರ್ಥಿಗಳಿಗೆ ವಿದಾಯ ಕೂಟ, ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬೀಳ್ಕೊಟ್ಟ ಉಪನ್ಯಾಸಕ ವೃಂದ