ಕರಾವಳಿಕೊಡಗು

ಮಡಿಕೇರಿ:ನೀವೆಲ್ಲಾದರೂ 5 ಕೆಜಿ ತೂಕದ ಗಜ ನಿಂಬೆ ಹಣ್ಣು ಕಂಡಿದ್ದೀರಾ..!ಇಷ್ಟೊಂದು ಗಾತ್ರದ ನಿಂಬೆ ಹಣ್ಣು ಸಿಕ್ಕಿದ್ಯಾರಿಗೆ?ಎಲ್ಲಿ ಸಿಕ್ಕಿತು?ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ ನೋಡಿ..

ನ್ಯೂಸ್ ನಾಟೌಟ್:ನಾವೆಲ್ಲ ಅಂಗಡಿ ಬಳಿ ಹೋದಾಗ ಸಣ್ಣ ಗಾತ್ರವಿರುವ ನಿಂಬೆ ಹಣ್ಣುಗಳನ್ನು ಕಂಡಿದ್ದೇವೆ.ಐದು ಕೆಜಿ ನಿಂಬೆ ಹಣ್ಣು ಬೇಕೆಂದರೂ ಸಾಧಾರಣವಾಗಿ ಎಷ್ಟು ನಿಂಬೆ ಹಣ್ಣುಗಳು ಬೇಕಾಗಬಹುದು? ನೀವೇ ಊಹಿಸಿ..ಆದರೆ ಇಲ್ಲೊಬ್ಬರು ವ್ಯಕ್ತಿಗೆ ಅವರು ಬೆಳೆದ ತೋಟದಲ್ಲಿ ಬರೋಬ್ಬರಿ ಐದು ಕೆಜಿ ತೂಕದ ಗಜ ನಿಂಬೆ ಹಣ್ಣು ಸಿಕ್ಕಿದೆ.ಇದನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ..!

ಸದ್ಯ ಎಲ್ಲರಿಗೂ ಕುತೂಹಲದ ವಿಷಯವಾಗಿದೆ.ಅಂದ ಹಾಗೆ ಇಷ್ಟೊಂದು ದೊಡ್ಡ ಗಾತ್ರದ ಗಜ ನಿಂಬೆ ಹಣ್ಣು ಸಿಕ್ಕಿರೋದು ಕೊಡಗು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ ಅವರಿಗೆ. ಅವರ ಮನೆ ಸಮೀಪದ ಕಾಫಿ ತೋಟದಲ್ಲಿ ಈ ಗಜ ನಿಂಬೆಹಣ್ಣು ಬೆಳೆದಿದೆ.ಮಾತ್ರವಲ್ಲ,ಇದನ್ನು ವೀಕ್ಷಿಸಲೆಂದೇ ಜನ ಇಲ್ಲಿಗೆ ಬರುತ್ತಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ವಿಜು ಸುಬ್ರಮಣಿ ಅವರು ಮೈಸೂರು ಮಾರುಕಟ್ಟೆಯಲ್ಲಿ ಸಿಟ್ರಸ್ ಹಣ್ಣು ಖರೀದಿ ಮಾಡಿ ತಂದಿದ್ದರು.ಅದರಲ್ಲಿ ಒಂದು ಹಣ್ಣು ಉಪಯೋಗಕ್ಕೆ ಬಾರದಿದ್ದಾಗ ಅದನ್ನು ಹೊರಗಡೆ ಬಿಸಾಕಿದ್ರಂತೆ.ಅದರಲ್ಲಿದ್ದ ಬೀಜಗಳ ಮೂಲಕ ಈ ಗಿಡ ಬೆಳೆದಿದೆ.ಬಳಿಕ ನೋಡೋಣ ಈ ಗಿಡ ಬೆಳೆದ್ರೆ ಬೆಳಿಯಿತು ಅನ್ನುತ್ತಾ ಸಮೀಪದ ಕಾಫಿ ತೋಟದಲ್ಲಿ ಬೆಳೆದರು.ಆರ್ಗನಿಕ್ ಗೊಬ್ಬರವನ್ನು ಬಳಸಿ ಗುಂಡಿ ತೋಡಿ ನೆಟ್ಟಿದ್ದರು.

ಸುಮಾರು ಮೂರು ವರ್ಷಗಳ ಕಾಲ ಗಿಡ ಮಾತ್ರ ಬೆಳೆದಿತ್ತು.ಆದರೆ ಗಿಡದಲ್ಲಿ ಹೂವು ಕಾಯಿ ಯಾವುದೂ ಕಂಡು ಬಂದಿರಲಿಲ್ಲ.ಇದು ಯಾವ ಗಿಡ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.ನಾಲ್ಕು ವರ್ಷಗಳ ನಂತರ ಇತ್ತೀಚೆಗೆ ಗಿಡದಲ್ಲಿ ಮಲ್ಲಿಗೆ ಹೂವಿನ ಆಕಾರದ ದೊಡ್ಡ ಹೂವುಗಳೊಂದಿಗೆ ಸಣ್ಣ ಕಾಯಿಗಳು ಕಾಣಿಸಿಕೊಂಡಿದ್ದವು.ಇಟಲಿ, ಯೂರೋಪ್ ದೇಶಗಳಲ್ಲಿ ಅಪರೂಪದಲ್ಲಿ ಕಂಡು ಬರುವ ಅಪರೂಪದ ಗಜ ನಿಂಬೆಹಣ್ಣುಗಳಾಗಿವೆ ಎನ್ನುತ್ತಾರೆ ವಿಜು ಸುಬ್ರಮಣಿ ಅವರು.

ವಿಜು ಸುಬ್ರಮಣಿ ಅವರು ಪರಿಸರ ಕಾಳಜಿ ಹಾಗೂ ಸಮಾಜ ಸೇವೆಗಾಗಿ ಬೆಂಗಳೂರಿನಲ್ಲಿ ನಡೆದ ಸಾಧಕರ ಸನ್ಮಾನ ಗೌರವ ಕಾರ್ಯಕ್ರಮದಲ್ಲಿ   ಸುವರ್ಣ ಕರ್ನಾಟಕ  ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದು ಹೆಮ್ಮೆಯ ಸಂಗತಿ. ಅಂದ ಹಾಗೆ ತಮ್ಮ ಕಾಫಿ ತೋಟದಲ್ಲಿ ಬೆಳೆದ ಗಜನಿಂಬೆ ಫಸಲನ್ನ ಸ್ಥಳೀಯ ದೇವಸ್ಥಾನಗಳಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜು ಸುಬ್ರಮಣಿ ಅವರು ಪರಿಸರ ಕಾಳಜಿ ಹಾಗೂ ಸಮಾಜ ಸೇವೆಗಾಗಿ ಬೆಂಗಳೂರಿನಲ್ಲಿ ನಡೆದ ಸಾಧಕರ ಸನ್ಮಾನ ಗೌರವ ಕಾರ್ಯಕ್ರಮದಲ್ಲಿ   ಸುವರ್ಣ ಕರ್ನಾಟಕ  ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದು ಹೆಮ್ಮೆಯ ಸಂಗತಿ. ಅಂದ ಹಾಗೆ ತಮ್ಮ ಕಾಫಿ ತೋಟದಲ್ಲಿ ಬೆಳೆದ ಗಜನಿಂಬೆ ಫಸಲನ್ನ ಸ್ಥಳೀಯ ದೇವಸ್ಥಾನಗಳಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ವಿಷಕಾರಿ ಜಂತು ಕಚ್ಚಿ ಕಾಲನ್ನೇ ಕಳೆದುಕೊಂಡ ವ್ಯಕ್ತಿಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ನೆರವು

ಗೂನಡ್ಕ: ಸ್ಕೂಟಿ- ಕಾರು ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು

‘ಛಾವ’ ಚಿತ್ರದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆಯೇ ನಂ.1 ನಟಿ ರಶ್ಮಿಕಾ ಮಂದಣ್ಣ..?! ಕಾರ್ಯಕ್ರಮವೊಂದರಲ್ಲಿ ನ್ಯಾಶನಲ್ ಕ್ರಶ್ ‘ನಿವೃತ್ತಿ’ ಬಗ್ಗೆ ಮಾತಾಡಿದ್ದೇಕೆ?