Uncategorized

ಪಂಡರಾಪುರಕ್ಕೆ ತೆರಳಿದ್ದ ವಿಠ್ಠಲ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..! ಭಕ್ತರ ಮೇಲೆ ಮಹಾರಾಷ್ಟ್ರದ ಪುಂಡರು ದಾಳಿ ಮಾಡಿದ್ದೇಕೆ..?

ನ್ಯೂಸ್‌ನಾಟೌಟ್‌: ಮಹಾರಾಷ್ಟ್ರದ ಪಂಡರಾಪುರಕ್ಕೆ ತೆರಳಿದ್ದ ಬೆಳಗಾವಿಯ ವಿಠ್ಠಲ ಭಕ್ತರ ಮೇಲೆ ಕೀಡೆಗೇಡಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲೂಕಿನ ಮಾಲಗಾಂವ ಗ್ರಾಮದಲ್ಲಿ ನಡೆದಿದೆ. 

ಹಲ್ಲೆಗೊಳಗಾದ ಸುರೇಶ್ ರಾಜುಕರ್, ಪರಶುರಾಮ ಜಾಧವ್, ಲಾರಿ ಚಾಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಷಾಢ ಏಕಾದಶಿ ನಿಮಿತ್ತ ತುರಮುರಿ ಗ್ರಾಮದ ಭಕ್ತರು ಬಾಡಿಗೆ ಲಾರಿ ಮಾಡಿಕೊಂಡು ಪಂಡರಾಪುರಕ್ಕೆ ತೆರಳಿದ್ದರು. ಪಂಡರಾಪುರ ವಿಠ್ಠಲನ ದರ್ಶನ ಪಡೆದು ಬೆಳಗಾವಿಗೆ ವಾಪಸ್ ಬರುತ್ತಿದ್ದ ವೇಳೆ ದಾರಿ ತಪ್ಪಿದ್ದಾರೆ. ಬೆಳಗಾವಿಗೆ ಬದಲು ಮಾಲಗಾಂವ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಲಾರಿಗೆ ಅಡ್ಡ ಬಂದ ಕಾರು. ಪಾನಮತ್ತನಾಗಿದ್ದ ಕಾರಿನ ಚಾಲಕ ಭಕ್ತರೊಂದಿಗೆ ಕಿರಿಕ್ ಮಾಡಿದ್ದಾನೆ. ಬಳಿಕ ಮೊಬೈಲ್ ಕರೆ ಮಾಡಿ ಸ್ಥಳಕ್ಕೆ ಪುಂಡರನ್ನು ಕರೆಸಿಕೊಂಡು ಭಕ್ತರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಮೂವರು ವಿಠ್ಠಲ ಭಕ್ತರು ಗಾಯಗೊಂಡಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸ್ವಾಮೀಜಿ ರೂಮಿನಲ್ಲಿ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ..!

ಯುವತಿ ನಾಪತ್ತೆ, ಪೊಲೀಸ್ ದೂರು, ಹುಡುಕಾಟ

ಬೆಂಕಿ ಹೊತ್ತಿಕೊಂಡಿರುವಾಗಲೇ ರಸ್ತೆ ಮೇಲೆ ವೇಗವಾಗಿ ಚಲಿಸಿದ ಕಾರು..! ದಿಕ್ಕಾಪಾಲಾಗಿ ಓಡಿದ ಜನ..! ಇಲ್ಲಿದೆ ವೈರಲ್ ವಿಡಿಯೋ