ರಾಜಕೀಯವೈರಲ್ ನ್ಯೂಸ್

ಕರ್ನಾಟಕ ಬಿಜೆಪಿ ಸ್ವಪಕ್ಷೀಯನಿಂದ ಮೋದಿ ವಿರುದ್ಧವೇ ಅವಹೇಳನಕಾರಿ ಮಾತು! ವೈರಲ್ ಆದ ಆಡಿಯೋದಲ್ಲಿ ಅಂತದ್ದೇನಿದೆ?

ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ವಿರುದ್ದವೇ ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋವೊಂದು ರಾಯಚೂರು ನಗರ ಬಿಜೆಪಿ ಶಾಸಕನದ್ದು ಎನ್ನಲಾಗಿದೆ. ಇದೀಗ ಜಾಲತಾಣದಲ್ಲಿ ಆಡಿಯೋ ವೈರಲ್ ಆಗುತ್ತಿದ್ದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.

“ಯಾವ ಮೋದಿಯಿಲ್ಲ,ಪಾದಿಯಿಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ.. ಮೋದಿ ರೈಟ್ ಹ್ಯಾಂಡ್ ಗೆ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ, ನನ್ನ ಕಾಲು, ನಾನೇ ಮೋದಿ, ನಾನೇ ಟ್ರಂಪ್.. ಯಾವನ ಬದನೆಕಾಯಿ ಮಾತು ಸಹ ನಾನು‌ ಕೇಳಲ್ಲ. ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ನನಗೆ ಯಾರೂ‌ ಇಲ್ಲ. .ನಾನು‌ ಸಿಂಗಲ್ ಆರ್ಮಿ. ಎಲೆಕ್ಷನ್ ನಲ್ಲಿ ಸೋತರು ಚಿಂತೆಯಿಲ್ಲ, ಗೆದ್ರು ಚಿಂತೆಯಿಲ್ಲ, ಮಲಗಿದರು ಚಿಂತೆಯಿಲ್ಲ.. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ,ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ..”

ಇದೀಗ ಈ ಮಾತುಗಳನ್ನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಇದೀಗ ಪಕ್ಷದೊಳಗೆ ಇದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಮುಂಖಡರಿಗೆ ಒತ್ತಡ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Related posts

ಏ11ರಿಂದ ಪೆರಾಜೆಯಲ್ಲಿ ಈಜೋಣ ಬನ್ನಿ.. ರಜೆಯ ಮಜಾ ಅನುಭವಿಸಲು ಇದು ಸಕಾಲ..!

ಶಾಲೆ ಹತ್ತಿರ ಸ್ಫೋಟಕಗಳು ಪತ್ತೆ..! ರಾಮೇಶ್ವರಂ ಕೆಫೆ ದುರಂತ ಮಾಸುವ ಮುನ್ನವೇ ತಪ್ಪಿದ ಭಾರೀ ಅನಾಹುತ..!

ಡಿಸಿ, ಎಸ್​ಪಿ ಮುಂದೆಯೇ ರೌಡಿಶೀಟರ್​ಗೆ ಕಾಂಗ್ರೆಸ್ ಶಾಸಕನಿಂದ ಭರ್ಜರಿ ಸನ್ಮಾನ..! ಸಾರ್ವಜನಿಕವಾಗಿ ಮುಜುಗರಕ್ಕೀಡಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ..!