ಕರಾವಳಿಕೊಡಗು

ರಾಷ್ಟ್ರ ಹಿತಕ್ಕಾಗಿ ನಾಳೆ ಎಲ್ಲರೂ ಮತಗಟ್ಟೆಯತ್ತ ನಡೆಯೋಣ, ನಮ್ಮ ಹಕ್ಕು ಚಲಾಯಿಸೋಣ

ನ್ಯೂಸ್ ನಾಟೌಟ್: ಪ್ರಿಯ ಓದುಗರೇ, ಮತದಾನ ಸಾಮಾನ್ಯರಲ್ಲಿ ಸಾಮಾನ್ಯ ನಾಗರಿಕನ ಹಕ್ಕು. ಮತದಾನದಂದು ಪ್ರಜೆಗಳೇ ಪ್ರಭುಗಳು. ನಾವು ಹಾಕುವ ಒಂದೊಂದು ಮತಗಳು ಕೂಡ ದೇಶದ ಭವಿಷ್ಯ ನಿರ್ಧರಿಸುತ್ತದೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಮತದಾನ ಮಾಡೋಣ. ಹಣ , ಹೆಂಡ, ಸೀರೆಯ ವ್ಯಾಮೋಹಕ್ಕೆ ಸಿಲುಕಿ ನಮ್ಮ ಮತವನ್ನು ಯಾರಿಗೂ ಮಾರಾಟ ಮಾಡದಿರೋಣ.

ಮೇ೧೦ರಂದು ಬೆಳಗ್ಗೆ ಮತಗಟ್ಟೆಯತ್ತ ನಡೆಯೋಣ, ಯಾವ ರಾಜಕಾರಣಿ ಏನೇ ಆಮಿಷ ಕೊಟ್ಟಿದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು ಅರ್ಹ ವ್ಯಕ್ತಿಗೆ ಮತ ನೀಡೋಣ. ಸಾಮಾಜಿಕ ಬದ್ಧತೆ ಹೊಂದಿದ ವ್ಯಕ್ತಿಯನ್ನು ಆರಿಸೋಣ, ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಐದು ವರ್ಷಕ್ಕೊಮ್ಮೆ ಮತದಾರನ ಬಳಿಗೆ ಬರುವ ನಾಲಾಯಕ್ ನಾಯಕರಿಗೆ ಬುದ್ಧಿಕಲಿಸೋಣ. ಎಲ್ಲರೂ ಒಗ್ಗೂಡಿ ಅಂತಹ ಅನರ್ಹರನ್ನು ತಿರಸ್ಕರಿಸೋಣ.

ಇಷ್ಟು ದಿನ ನಿಮ್ಮ ಜತೆಗಿದ್ದವರು ಯಾರು? ಕಷ್ಟ ಸುಖದಲ್ಲಿ ಭಾಗಿಯಾದವರು ಯಾರು? ಯಾವ ಪಕ್ಷದವರು ನಿಮಗೆ ಏನು ಸಹಾಯ ಮಾಡಿದ್ದಾರೆ? ಯಾವ ರಾಜಕೀಯ ನಾಯಕ ಹೇಗೆ? ಇದೆಲ್ಲವು ನಿಮ್ಮ ಮನದಲ್ಲಿದೆ. ಈಗ ಬದಲಾವಣೆಯ ಸಮಯ ಬಂದಿದೆ. ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡಬೇಕಿರುವುದು ಮತದಾರ ಪ್ರಭುಗಳ ಕರ್ತವ್ಯ. ಆಯ್ಕೆ ನಿಮ್ಮದು. ಉತ್ತಮ ವ್ಯಕ್ತಿಯಷ್ಟೇ ಆರಿಸಿ ಬರಬೇಕು. ಭ್ರಷ್ಟರು, ಸ್ವಾರ್ಥಿಗಳು ಆಯ್ಕೆಯಾಗಬಾರದು ಅನ್ನುವ ಧ್ಯೇಯವನ್ನಿಟ್ಟುಕೊಂಡು ಮತದಾನ ಮಾಡಬೇಕಿದೆ.

ಶಿಕ್ಷಣ, ನೀರು, ಪರಿಸರ ಸಂರಕ್ಷಣೆ, ಕೃಷಿ, ರಸ್ತೆಗಳು, ಯೋಜಿತ ನಗರಾಭಿವೃದ್ಧಿ ಇತ್ಯಾದಿ ವಿಚಾರಗಳ ಬಗ್ಗೆ ಇಂದು ಸದನದಲ್ಲಿ ಚರ್ಚೆಯಾಗುವುದೇ ಇಲ್ಲ. ಬದಲಾಗಿ ಧರ್ಮ ಕಲಹ, ಆರೋಪ ಪ್ರತ್ಯಾರೋಪಗಳಲ್ಲಿಯೇ ರಾಜಕೀಯ ನಾಯಕರುಗಳು ತೊಡಗಿಕೊಂಡಿರುತ್ತಾರೆ. ಚುನಾವಣೆ ಬಂದ ಸಂದರ್ಭದಲ್ಲಿ ಮಾತ್ರ ಹೆಚ್ಚಿನ ನಾಯಕರು ಪ್ರಣಾಳಿಕೆ ಹಾಗೂ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುತ್ತಾರೆ. ಇಂತಹ ನಾಯಕರ ಅಗತ್ಯ ಸಮಾಜಕ್ಕೆ ಇದೆಯೇ ಅನ್ನುವುದನ್ನು ಮೊದಲಾಗಿ ಯೋಚಿಸುವ ಅಗತ್ಯವಿದ್ದು ಬೆರಳಿನ ಮೂಲಕ ಸೂಕ್ತ ಉತ್ತರ ನೀಡುವ ಸಮಯವಿದು. ಆತ್ಮೀಯ ಓದುಗರೇ ತಪ್ಪದೆ ನೀವೆಲ್ಲರೂ ಮತದಾನ ಮಾಡಿ ಎಂದು ನ್ಯೂಸ್ ನಾಟೌಟ್ ಮೂಲಕ ನಾವು ಮನವಿ ಮಾಡುತ್ತಿದ್ದೇವೆ.

Related posts

ಐವರ್ನಾಡು : ಬೆಂಕಿ ತಗುಲಿ ಕಣ್ಣೆದುರೇ ಸುಟ್ಟು ಕರಕಲಾದ ಮನೆ

ಧರ್ಮಸ್ಥಳಕ್ಕೆ ಪುಸಲಾಯಿಸಿ ಕರೆಯಿಸಿಕೊಂಡಿದ್ದ, ವಿವಿಧ ಕಡೆ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಅಪರಾಧಿಗೆ 10 ವರ್ಷ ಜೈಲು, 2 ವರ್ಷದ ಬಳಿಕ ಸಂತ್ರಸ್ತೆಗೆ ಸಿಕ್ಕಿತು ನ್ಯಾಯ..!

ಸುಳ್ಯ : NMC ಯಲ್ಲಿ NCC ವತಿಯಿಂದ ಶಿಕ್ಷಕರ ದಿನಾಚರಣೆ – ಸಾಧಕರಿಗೆ ಸನ್ಮಾನ