ಕರಾವಳಿರಾಜಕೀಯ

ಯೋಗಿ ಆದಿತ್ಯನಾಥ್ ಕಾರ್ಕಳ ಭೇಟಿಯನ್ನು ಯಶಸ್ವಿಗೊಳಿಸುವಂತೆ ಬಿಜೆಪಿ ಅಭ್ಯರ್ಥಿ ವಿ ಸುನೀಲ್ ಕುಮಾರ್ ಕರೆ, ರೆಂಜಾಳ ಗ್ರಾಮಸ್ಥರಲ್ಲಿ ಮತ ಯಾಚನೆ

ನ್ಯೂಸ್ ನಾಟೌಟ್: ಕಾರ್ಕಳ ವಿಧಾನಸಭಾ ಕ್ಷೇತ್ರದ ರೆಂಜಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸುನೀಲ್ ಕುಮಾರ್ ಭೇಟಿ ಮಾಡಿದರು.

ಈ ವೇಳೆ ಪ್ರಚಾರ ಸಭೆ ಆಯೋಜಿಸಿ ಮಾತನಾಡಿದ ವಿ ಸುನೀಲ್ ಕುಮಾರ್ ಮೇ ೬ ರಂದು ಕಾರ್ಕಳಕ್ಕೆ ಯೋಗಿ ಆದಿತ್ಯ ನಾಥ್ ಬರಲಿದ್ದು ನಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸುವುದರ ಜೊತೆಗೆ ನಾವೆಲ್ಲರೂ ಜೊತೆ ಸೇರಿ ಬಿಜೆಪಿಯನ್ನು ಗೆಲ್ಲಿಸೋಣ ಎಂದು ಸುನೀಲ್ ಕುಮಾರ್ ಹೇಳಿದರು.
ಈ ವೇಳೆ ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ನನಗೆ ನೀಡಿ ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗಾಗಿ ಹರಸಿ ಆಶೀರ್ವದಿಸುವಂತೆ ಮತದಾರ ಪ್ರಭುಗಳನ್ನು ಕೇಳಿಕೊಂಡರು. ಈ ವೇಳೆ ಕಾರ್ಕಳ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ರೆಂಜಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಯಜಮಾನನ ಜತೆ ಹಸುವಿಗೂ ಆಶ್ರಯ ಕೊಟ್ಟ ಸ್ನೇಹ ಶಾಲೆ..!

ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು..! ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ನಿವೇಶನ ಪಡೆದರಾ ಸಿಎಂ..?

ಮಂಗಳೂರು: ಕೋವಿಡ್ -19 ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕಡ್ಡಾಯ