ಕರಾವಳಿ

ಕಾರ್ಕಳ: 30 ವಿದ್ಯಾರ್ಥಿನಿಯರ ಲವ್ ಜಿಹಾದ್ ಗೆ ಯತ್ನ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಈ ನಡುವೆಯೇ ಕಾರ್ಕಳವೊಂದರಲ್ಲಿ ಓರ್ವ ಚಾಲಕ 30 ಹಿಂದೂ ವಿದ್ಯಾರ್ಥಿನಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸಲು ಯತ್ನಿಸಿದ್ದಾನೆ ಅನ್ನುವ ಸ್ಫೋಟಕ ಸುದ್ದಿ ಹೊರಬಿದ್ದಿದೆ.

ಸ್ವತಃ ಈ ಸುದ್ದಿಯನ್ನು ಬಜರಂಗ ದಳದ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಅವರು ತಿಳಿಸಿದ್ದಾರೆ. ಹಿಂದೂ ಹೆಣ್ಣು ಮಕ್ಕಳ ಮೊಬೈಲ್ ನಂಬರ್ ಪಡೆದು ವಿಡಿಯೋ ಕಳಿಸಿ ಬ್ಲ್ಯಾಕ್ ಮೈಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿದ ಸುನಿಲ್ , ‘ಚಾಲಕ ನೊಬ್ಬ ಹಿಂದೂ ಹೆಣ್ಣು ಮಕ್ಕಳ ನಂಬರ್ ಹೊಂದಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಆತನ ಮೊಬೈಲ್‌ನಲ್ಲಿ ಮುಸ್ಲಿಂ ಹುಡುಗಿಯರ ಯಾವುದೇ ಮೊಬೈಲ್ ನಂಬರ್‌ಗಳಿಲ್ಲ. ಹಿಂದೂ ಹುಡುಗಿಯರದ್ದೇ ಮೊಬೈಲ್ ನಂಬರ್‌ಗಳಿವೆ. ಆತ ಹಿಂದೂ ಸಮುದಾಯವನ್ನು ಟಾರ್ಗೆಟ್ ಮಾಡುವುದಕ್ಕೆ ಯತ್ನಿಸಿದ್ದ. ಸುಮಾರು 30 ಹಿಂದೂ ವಿದ್ಯಾರ್ಥಿನಿಯರನ್ನು ಲವ್‌ ಜಿಹಾದ್ ಮಾಡುವುದಕ್ಕೆ ಪ್ರಯತ್ನಿಸಿದ್ದಾನೆ. ದೇಶ ದ್ರೋಹಿ ಕೃತ್ಯಗಳಲ್ಲಿ ಹೆಣ್ಣು ಮಕ್ಕಳನ್ನು ಉಪಯೋಗಿಸಲು ಯತ್ನ ನಡೆಯುತ್ತದೆ. ಲವ್ ಜಿಹಾದ್ ಹೆಸರಿನಲ್ಲಿ ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಅಶಾಂತಿ ಉಂಟಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

Related posts

ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಆತಿಥ್ಯದ ಕಬಡ್ಡಿ ಕೂಟ ಆರಂಭ, AOLE (R) ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಸೇರಿದಂತೆ ಗಣ್ಯರು ಭಾಗಿ

ಮಕ್ಕಳ ಕಳ್ಳರು ಇದ್ದಾರೆ.. ನಿಜಾನಾ? ಸುಳ್ಳಾ?

ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ‘ಕೆದಂಬಾಡಿ ರಾಮಯ್ಯ ಗೌಡ’ರ ಸ್ತಬ್ಧಚಿತ್ರ,ಹಲವು ವಿಶೇಷತೆಗಳನ್ನೊಳಗೊಂಡ ಶೋಭಾಯಾತ್ರೆ ಹೇಗಿರಲಿದೆ ಇಲ್ಲಿದೆ ವಿವರ..