ಕರಾವಳಿ

ಕಾರ್ಕಳ: ಕಾಂಗ್ರೆಸ್‌ನಿಂದ ಮೇ1ರಂದು ಅದ್ದೂರಿ ರೋಡ್ ಶೋ, ಬೃಹತ್ ಸಮಾವೇಶ;ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ

ನ್ಯೂಸ್ ನಾಟೌಟ್: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಕಾಲ್ನಡಿಗೆ ಜಾಥಾ ಹಾಗೂ ಬೃಹತ್ ಸಮಾವೇಶ ಮೇ 1 ಸೋಮವಾರ ರಂದು ಆಯೋಜಿಸಲಾಗಿದೆ.ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇದೆ.

ಮಧ್ಯಾಹ್ನ 3ಕ್ಕೆ ಸ್ವರಾಜ್ಯ ಮೈದಾನದಿಂದ ಪ್ರಾರಂಭಗೊಳ್ಳುವ ಬೃಹತ್ ಜಾಥವು ಬಂಡೀಮಠ ಬಸ್ ನಿಲ್ದಾಣದವರೆಗೆ ಇರಲಿದೆ. ಕಾಲ್ನಡಿಗೆಯಲ್ಲಿ ರೋಡ್ ಶೋ ಮೂಲಕ ಸಾಗಿ ಬಂದು ಬೃಹತ್ ಸಮಾವೇಶದೊಂದಿಗೆ ಸಮಾಪನಗೊಳ್ಳಲಿದೆ ಎಂದು ತಿಳಿದು ಬಂದಿದೆ.ಈ ವೇಳೆ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ ವೀರಪ್ಪ ಮೊಯಿಲಿ, ಅಭ್ಯರ್ಥಿ ಮುನಿಯಾಲ್ ಉದಯ್ ಶೆಟ್ಟಿ, ಪ್ರಮುಖ ಭಾಷಣಗಾರರಾಗಿ ವಾಗ್ಮಿ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೋಳಿ, ಮತ್ತು ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಪಕ್ಷದ ರಾಜ್ಯ ನಾಯಕರು, ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ.ಈ ಸಂದರ್ಭ ಪ್ರತೀ ಬೂತ್ ನಿಂದ 200 ಕ್ಕೂ‌ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

Related posts

ಆಗುಂಬೆ: 30 ಅಡಿ ಪ್ರಪಾತಕ್ಕೆ ಬಿದ್ದ ಮುಸ್ಲಿಂ ವ್ಯಾಪಾರಿಯನ್ನು ರಕ್ಷಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು..!, ಆಗುಂಬೆ ಘಾಟಿ 7ನೇ ತಿರುವಿನಲ್ಲಿ ಆಗಿದ್ದೇನು..?

ತನಿಖೆಗೆ ಹೆದರಿ ಚೈತ್ರಾ ಕುಂದಾಪುರ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಮನೆಯಲ್ಲಿ ಆಶ್ರಯ ಪಡೆದರಾ? ಹಿಂದೂ ಹೋರಾಟಗಾರ್ತಿ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್!

ಕಾಂತಾರ ಅಧ್ಯಾಯ 1ರ ಟೀಸರ್ ನೋಡಿ ವಾವ್.. ಎಂದ ಗೂಗಲ್..!ಈ ರೀತಿ ಹೇಳಲು ಕಾರಣವೇನು?ಗೂಗಲ್‌ ಬರೆದುಕೊಂಡ ಪೋಸ್ಟ್‌ನಲ್ಲೇನಿದೆ?