ಕರಾವಳಿ

ಕಾರಿಂಜ ಪ್ರಕರಣ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ವಿರುದ್ಧವೇ ಪೊಲೀಸ್‌ ದೂರು ಸಲ್ಲಿಸಿದ ವಿದ್ಯಾರ್ಥಿನಿಯರು

ಬಂಟ್ವಾಳ: ಕಾರಿಂಜದ ದೇವಸ್ಥಾನದ ಬಳಿ ಮುಸ್ಲಿಂ ಯುವಕರೊಂದಿಗೆ ಪತ್ತೆಯಾಗಿದ್ದ ಹಿಂದೂ ಯುವತಿಯರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಲಭಿಸಿದೆ. ನಮ್ಮ ಮೇಲೆ ಹಿಂದೂ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಪೂಂಜಾಲಕಟ್ಟೆ ಪೊಲೀಸ್‌ ಠಾಣೆಗೆ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ. ಖಾಸಗಿ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರು ಮೂವರು ಮುಸ್ಲಿಂ ಯುವಕರೊಂದಿಗೆ ಕಾರಿಂಜ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಯುವತಿಯರು ಮತ್ತು ಯುವಕರನ್ನು ಹಿಡಿದು ಹಿಂದೂ ಜಾಗರಣಾ ವೇದಿಕೆಯವರು ಪೂಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದರು. ಯುವತಿ ನೀಡಿದ ಪ್ರತಿ ದೂರಿನ ಮೇರೆಗೆ ಐವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.

Related posts

ಸೌಜನ್ಯ ಕೇಸ್ : ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ, ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಪ್ರಾರ್ಥಿಸಿದ ಮಾಲಾಧಾರಿಗಳು

ಕಳಚಿ ಬಿತ್ತು ತೆಂಕು ತಿಟ್ಟಿನ ಯಕ್ಷಗಾನ ಪರಂಪರೆಯ ಹಿರಿಯ ಕೊಂಡಿ

ಧರ್ಮಸ್ಥಳದ ಹಿರಿಯ ಆನೆ ಲತಾ ಇನ್ನಿಲ್ಲ..!ಮಹಾಶಿವರಾತ್ರಿಯಂದೇ ಕೊನೆಯುಸಿರೆಳೆದ ಆನೆಗೆ ಆಗಿದ್ದೇನು?