ಕೊಡಗುಸುಳ್ಯ

ಕರಿಕೆ : 548ನೇ ಕರಿಕೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ 58ನೇ ವಾರ್ಷಿಕ ಮಹಾಸಭೆ

ನ್ಯೂಸ್ ನಾಟೌಟ್ : ನಂ. 548ನೇ ಕರಿಕೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಸಹಕಾರ ಸಂಘದ 2022-23ನೇ ಸಾಲಿನ 58ನೇ ವಾರ್ಷಿಕ ಮಹಾಸಭೆ ಶನಿವಾರ ಸಂಘದ ಕಟ್ಟಡದಲ್ಲಿ ನಡೆಯಿತು.

ಕರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಜೆ. ಶರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಆಧುನೀಕರಣ ಮತ್ತು ಸಂಘದ ಲೆಕ್ಕಾಚಾರ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭ ಡಿ.ಸಿ.ಸಿ. ಕೊಡಗು ಜಿಲ್ಲಾ ಸಹಕಾರ ಸಂಘ ಬ್ಯಾಂಕ್‌ನ ಮ್ಯಾನೇಜರ್ ಕೆ. ನಾರಾಯಣ, ಡಿ.ಸಿ.ಸಿ, ಕೊಡಗು ಜಿಲ್ಲಾ ಸಹಕಾರ ಸಂಘ ಬ್ಯಾಂಕ್‌ನ ಮೇಲ್ವಿಚಾರಕ ನಾರಾಯಣ, ಬ್ಯಾಂಕ್‌ ಸೆಕ್ರೆಟರಿ ಎನ್.ಸಿ ಗಂಗಾಧರ, ನಿರ್ದೇಶಕರು ಮತ್ತು ನೂತನ ನಿರ್ದೇಶಕರು, ಮತ್ತು 2066 ಸದಸ್ಯರಲ್ಲಿ 1214 ಸದಸ್ಯರು ಪಾಲ್ಗೊಂಡಿದ್ದರು. ಸಂಘ ಈ ವರ್ಷ 28,16,576 ಆದಾಯ ಗಳಿಸಿದ್ದು, ಸದಸ್ಯರಿಗೆ ಶೇ. 11.5 ಡಿವಿಡೆಂಡ್ ವಿತರಿಸಲಾಗಿದೆ. ಮೀನಾಕ್ಷಿ ಮತ್ತು ಗುಣಶೀಲ ಪ್ರಾರ್ಥನೆ ಹಾಡಿದರು. ಹೊಸಮನೆ ಹರೀಶ್ ಸ್ವಾಗತಿಸಿದರು.

Related posts

ಸುಳ್ಯದ ಕುಮ್ ಕುಮ್ ಫ್ಯಾಶನ್ ನಲ್ಲಿ ಬ್ರಾಂಡೆಡ್ ರೈನ್‌ ಕೋಟ್ ಗಳ ಅಮೋಘ ಸಂಗ್ರಹ! ವಿವಿಧ ಬಣ್ಣಗಳ ಬ್ರಾಂಡೆಡ್ ಕಲರ್ ಫುಲ್ ರೈನ್ ಕೋಟ್‌ಗಳು!

ಮಡಿಕೇರಿ:ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣು,ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ

ಹಠಾತ್ ಹೃದಯಾಘಾತಕ್ಕೆ ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಲಿ, ಕರ್ತವ್ಯ ಮುಗಿಸಿ ನಗುನಗುತ್ತಾ ಮನೆಗೆ ಬಂದು ಮಲಗಿದವರು ಅಸ್ವಸ್ಥ, ಸಾವು