ದೇಶ-ಪ್ರಪಂಚ

ರಾಕಿಂಗ್ ಸ್ಟಾರ್‌ ಯಶ್‌ ಜತೆಗೆ ನಟಿಸಲಿದ್ದಾರೆಯೇ ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌?ಈ ಬಗ್ಗೆ ‘ಟಾಕ್ಸಿಕ್’ ಚಿತ್ರ ತಂಡ ಹೇಳಿದ್ದೇನು?

ನ್ಯೂಸ್ ನಾಟೌಟ್ : ಇಡೀ ಪ್ರಪಂಚದಾದ್ಯಂತ ರಾಕಿಂಗ್ ಸ್ಟಾರ್‌ ಯಶ್ ಅವರನ್ನು ಗುರುತಿಸುವಂತೆ ಮಾಡಿದ್ದ ಸಿನಿಮಾ ಅಂದ್ರೆ ಅದು ‘ಕೆಜಿಎಫ್’ . ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ಚಿತ್ರ ಯಾವುದು ಎಂದು ಅಭಿಮಾನಿಗಳು ಕೂಡ ಕಾತುರರಾಗಿದ್ದು, ಒಂದೊಳ್ಳೆ ಸಿನಿಮಾ ನಿರ್ಮಾಣದ ಅವಶ್ಯಕತೆಯೂ ಇದೆ.

ಈ ವಿಚಾರದಲ್ಲಿ ಯಶ್ ಅವರು ಹೆಚ್ಚಿನ ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಆದ ಮೇಲೆ ಒಂದೂವರೆ ವರ್ಷಗಳ ನಂತರ, ಅವರು ತಮ್ಮ ಮುಂದಿನ ಚಿತ್ರ ‘ಟಾಕ್ಸಿಕ್’ ಎಂದು ಘೋಷಿಸಿದರು. ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಅಂದಹಾಗೆ ಹಿಂದಿ ಚಲನಚಿತ್ರ ವಲಯಗಳಿಂದ ಕೇಳಿಬರುತ್ತಿರುವ ವದಂತಿಗಳ ಪ್ರಕಾರ, ಈ ಸಿನಿಮಾದಲ್ಲಿ ನಟಿಸುವಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರನ್ನು ಚಿತ್ರತಂಡ ಸಂಪರ್ಕಿಸಿದ್ದು, ನಟಿ ಸಕಾರಾತ್ಮಕ ಒಪ್ಪಿಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರಂತೆ.

ಕರೀನಾ ಯಶ್​​​​ಗೆ ಜೋಡಿಯಾಗಿದ್ದಾರೆಯೇ ಅಥವಾ ಟಾಕ್ಸಿಕ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಸದ್ಯ ಪ್ರಕಟಣೆಯ ಜೊತೆಗೆ, ಚಿತ್ರದ ಥೀಮ್ ಅನ್ನು ಬಹಿರಂಗಪಡಿಸುವ ಕಿರು ವಿಡಿಯೋಬೈಟ್ ಅನ್ನು ಅನಾವರಣಗೊಳಿಸಲಾಗಿದೆ.

‘ಟಾಕ್ಸಿಕ್’ ಗೋವಾ ಹಿನ್ನಲೆಯುಳ್ಳ ಚಿತ್ರವಾಗಿದ್ದು, ಕಥೆಯು ಡ್ರಗ್ಸ್ ಸುತ್ತ ಸುತ್ತುತ್ತದೆ ಎಂಬ ವರದಿಗಳಿವೆ. KVN ಪ್ರೊಡಕ್ಷನ್ಸ್ ನಿರ್ಮಾಪಕರು ಚಿತ್ರವು ಏಪ್ರಿಲ್ 10, 2025 ರಂದು ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಕರೀನಾ ಕಪೂರ್ ಖಾನ್ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅವರು ಶೀಘ್ರದಲ್ಲೇ ಅಜಯ್ ದೇವಗನ್ ಅವರೊಂದಿಗೆ ಸಿಂಗಮ್ ಎಗೇನ್ ಸೆಟ್‌ಗೆ ಸೇರಲಿದ್ದಾರೆ.

Related posts

ಸುಳ್ಯ ತಾಲೂಕು ನಗರ ಪಂಚಾಯತ್‌ ಆವರಣದಲ್ಲಿ ಯುದ್ಧಸ್ಮಾರಕ..!ನಾಳೆ ಸಂಜೆ ನಡೆಯಲಿದೆ ವಿಶೇಷ ಕಾರ್ಯಕ್ರಮ..ಏನೇನಿರಲಿದೆ?ಇಲ್ಲಿದೆ ರಿಪೋರ್ಟ್..

NDA ಸಂಸದೀಯ ಸಭೆಯಲ್ಲಿ ಮೈತ್ರಿ ನಾಯಕನ ಅಧಿಕೃತ ಆಯ್ಕೆ, ಸಂಸತ್ ಭವನದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಮತ್ತು ನಿತೀಶ್​ ಕುಮಾರ್ ಹೇಳಿದ್ದೇನು..?

5 ಲಕ್ಷ ಮತಗಳಿಂದ ಅಮಿತ್‌ ಶಾ ಗೆಲುವು, ಭದ್ರಕೋಟೆಗಳಲ್ಲಿ ಬಿಜೆಪಿಗೆ ಹಿನ್ನೆಡೆ