Uncategorized

ಚಲಿಸುತ್ತಿರುವ ರೈಲಿನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಬಾಲಕ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ರೀಲ್ಸ್ ಹುಚ್ಚಾಟದಿಂದ ಅದೆಷ್ಟೋ ಯುವಕರು ಪ್ರಾಣ ಕಳೆದುಕೊಂಡ ಬಗ್ಗೆ ದಿನಾ ಸುದ್ದಿಯಾಗುತ್ತಿರುತ್ತದೆ. ಈಗ ಅಂತದ್ದೇ ದುರಂತವೊಂದು ಬಾಂಗ್ಲಾದೇಶದ ರಂಗ್‌ ಪುರದಲ್ಲಿ ನಡೆದಿದೆ. ಅ.26ರಂದು ಹುಡುಗರ ಗುಂಪೊಂದು ರೈಲ್ವೆ ಹಳಿ ಮೇಲೆ ನಿಂತು ರೀಲ್ಸ್​​ ಮಾಡಿದ್ದು, ವೇಗವಾಗಿ ಬಂದ ರೈಲು ಬಾಲಕನಿಗೆ ಡಿಕ್ಕಿ ಹೊಡೆದಿದೆ.

ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಹುಡುಗರ ಗುಂಪೊಂದು ರೈಲ್ವೇ ಟ್ರ್ಯಾಕ್ ಬಳಿ ನಿಂತು ಚಲಿಸುತ್ತಿರುವ ರೈಲಿನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ರೈಲು ಹತ್ತಿರ ಬರುತ್ತಿದ್ದಂತೆ ಹುಡುಗರು ಫೋನ್​ ಹಿಡಿದು ರೆಡಿಯಾಗಿದ್ದಾರೆ. ವೇಗವಾಗಿ ಬಂದ ರೈಲು ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬಾಲಕ ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ.

ಅಕ್ಟೋಬರ್ ​26ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. “ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಲು ಇಂತಹ ಹುಚ್ಚು ಸಾಹಸಗಳನ್ನು ಮಾಡಿ ಪ್ರಾಣ ಕಳೆದುಕೊಳ್ಳಬೇಡಿ” ಎಂದು ಸಾಕಷ್ಟು ಜನ ಸಲಹೆ ನೀಡಿದ್ದಾರೆ.

Click

https://newsnotout.com/2024/10/kannada-news-kodagu-and-hyderabad-link-in-case-kannada-news-d-kushalnagara/
https://newsnotout.com/2024/10/4-month-later-ekta-gupta-and-gym-traner-case-revealed/
https://newsnotout.com/2024/10/railway-kannada-news-viral-news-bandra-railway-station-mumbai/
https://newsnotout.com/2024/10/belekeri-mining-issue-7-year-jail-mla-sathish-sail-kannada-news-s/
https://newsnotout.com/2024/10/selfy-kannada-news-elephant-kannada-news-elephant/
https://newsnotout.com/2024/10/udupi-railway-box-sakaleshpura-man-nomnore-kannada-news/
https://newsnotout.com/2024/10/10-th-class-boy-and-frinds-who-are-tailers-are-nomore/

Related posts

ಬಿಜೆಪಿ ನಾಯಕರ ಸರಣಿ ರಾಜೀನಾಮೆ, ಏನಿದು ಗಡಿ ಪ್ರದೇಶದಲ್ಲಿ ಗಡಿಬಿಡಿ?

ಪ್ರತಿದಿನ ನೆನಸಿದ ಕಡ್ಲೆ ಬೀಜ ತಿನ್ನಿ, ಹಲವು ರೋಗಗಳಿಂದ ದೂರವಿರಿ

ದಸರಾದ 13 ಆನೆಗಳಿಗೆ ಜನರ ಕಣ್ಣೀರ ಬೀಳ್ಕೊಡುಗೆ..! ಲಾರಿ ಏರಲು ಸತಾಯಿಸಿದ ಏಕಲವ್ಯ, ಇಲ್ಲಿದೆ ವಿಡಿಯೋ