ಕ್ರೀಡೆ/ಸಿನಿಮಾರಾಜಕೀಯ

ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ ಕುಮಾರ್ ! ಗೀತಾ ಜೊತೆ ಪ್ರಚಾರಕ್ಕಿಳಿದ ಸೆಂಚುರಿ ಸ್ಟಾರ್

ನ್ಯೂಸ್ ನಾಟೌಟ್:   ಇಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾದರು ಎಂದು ವರದಿ ತಿಳಿಸಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿ ಹಾಗೂ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ, ದಿವಂಗತ ಡಾ. ರಾಜ್ ಕುಮಾರ್ ಕುಟುಂಬದ ಹಿರಿ ಸೊಸೆ ಗೀತಾ ಶಿವರಾಜ್ ಕುಮಾರ್ ಅವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ವೇಳೆ ಮಧು ಬಂಗಾರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಪ್ರತಿ ಬಾರಿಯೂ ಮಧು ಬಂಗಾರಪ್ಪನವರನ್ನು ಬೆಂಬಲಿಸುತ್ತಾ ಬಂದಿರುವ ಗೀತಾ ಶಿವರಾಜ್ ಕುಮಾರ್ ಅವರು ಈ ಬಾರಿಯೂ ತಮ್ಮ ಕಿರಿಯ ಸಹೋದರನ ಪರ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ನಟ ಶಿವರಾಜ್​ ಕುಮಾರ್ ಸಹ ಗೀತಾ ಜೊತೆ ಪ್ರಚಾರಕ್ಕೆ ಹೋಗುವುದಾಗಿ ಹೇಳಿಕೆ ನೀಡಿದ್ದಾರೆ.

Related posts

ಪೇರಡ್ಕ ಹಿಂದಿನಿಂದಲೂ ಸೌಹಾರ್ದತೆಯ ಬೀಡು, ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿಕೆ

ದೇವಸ್ಥಾನದಲ್ಲಿ ಹಿಂದೂ ಜೋಡಿಯ ಮದುವೆ ಮಾಡಿಸಿದ ಮುಸ್ಲಿಂ ಲೀಗ್, ಅದ್ದೂರಿ ವಿವಾಹ ಸಂಭ್ರಮ ಹೇಗಿತ್ತು?

‘ನಮ್ಮವರು ಖಡ್ಗ ತೆಗೆದುಕೊಂಡರೆ ಡೈರೆಕ್ಟ್ ಪಾಕಿಸ್ತಾನಕ್ಕೆ ಹೋಗ್ತೀರಿ..!’ ಯತ್ನಾಳ್ ಈ ರೀತಿ ಹೇಳಿದ್ದೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ