ದೇಶ-ಪ್ರಪಂಚವೈರಲ್ ನ್ಯೂಸ್

ಪ್ರಿಯಕರನೊಂದಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪತ್ನಿ,’ಅಮ್ಮನಿಗೆ ಹೊಡಿಬೇಡಿ’ ಎಂದು ಮಕ್ಕಳು ಬೇಡಿಕೊಂಡರೂ ಮನಬಂದಂತೆ ಥಳಿಸಿ,ತಲೆ ಬೋಳಿಸಿದ ಪತಿ,ವೈರಲ್ ವಿಡಿಯೋ ಇಲ್ಲಿದೆ..

ನ್ಯೂಸ್ ನಾಟೌಟ್ : ತಾನು ಮದುವೆಯಾದ ಹೆಂಡತಿ ಪ್ರಿಯಕರನೊಂದಿಗಿದ್ದುದನ್ನು ಕಂಡು ಶಾಕ್ ಗೊಳಗಾಗಿ ಆಕೆಗೆ ದೊಣ್ಣೆಯಿಂದ ಥಳಿಸಿ ತಲೆ ಬೋಳಿಸಿರುವ ಘಟನೆ ವರದಿಯಾಗಿದೆ.ಬಿಹಾರದ ಮೋತಿಹಾರಿಯಲ್ಲಿ ಈ ಘಟನೆ ನಡೆದಿದೆ.

ಹೌದು, ಮೋತಿಹಾರಿಯಲ್ಲಿ ವಿವಾಹಿತ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ಪ್ರೇಮಿಗೆ ಗ್ರಾಮಸ್ಥರು ಕೂಡ ಮನಬಂದಂತೆ ಥಳಿಸಿದ ಘಟನೆ ವರದಿಯಾಗಿದೆ.ವರದಿಗಳ ಪ್ರಕಾರ, ಮದುವೆಯಾಗಿದ್ದ ಮಹಿಳೆಯೊಬ್ಬಳು ಮತ್ತೊಬ್ಬನ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆಂದು ವರದಿಯಾಗಿದೆ. ಈಕೆ ತನ್ನ ಗಂಡ ಹೊರಗಡೆ ಹೋಗಿದ್ದಾನೆಂದು ಹೇಳಿ ಆತನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದಳು ಎನ್ನಲಾಗಿದೆ.

ಪ್ರೇಯಸಿಯನ್ನು ಭೇಟಿ ಮಾಡಲು ಬಂದಾತ ಮಹಿಳೆ ಜತೆಗೆ ಚಕ್ಕಂದವಾಡುತ್ತಿದ್ದ.ಈ ವೇಳೆ ಪತ್ನಿಯನ್ನು ನೋಡಿ ಮನೆಗೆ ಬಂದ ಗಂಡನಿಗೆ ಶಾಕ್ ಆಗಿದೆ. ಇಬ್ಬರೂ ಆ ಸ್ಥಿತಿಯಲ್ಲಿರುವುದನ್ನು ಕಂಡ ಪತಿ, ಪತ್ನಿ ಮತ್ತು ಪ್ರಿಯಕರನಿಗೆ ಕೋಲಿನಿಂದ ಥಳಿಸಿದ್ದಾನೆ ಎಂದು ತಿಳಿದು ಬಂದಿದೆ.

ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಸಹ ಮಹಿಳೆ ಮತ್ತು ಪ್ರಿಯಕರನಿಗೆ ಚೆನ್ನಾಗಿ ಮನಬಂದಂತೆ ಥಳಿಸಿದ್ದಾರೆ.ಈ ವೇಳೆ ತಾಯಿಯನ್ನು ಥಳಿಸುತ್ತಿರುವಾಗ ಮಕ್ಕಳು ಕೂಡ ತಾಯಿಗೆ ಹೊಡೆಯಬೇಡಿ ಎಂದು ಬೇಡಿಕೊಂಡಿದ್ದು,ಮಕ್ಕಳನ್ನು ನೋಡದೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಥಳಿಸುತ್ತಿರುವ ವಿಡಿಯೋ  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದೆ. ಈ ವೇಳೆ ಮಹಿಳೆ ಅಳುತ್ತಿರುವುದು ಸಹ ಕಂಡುಬಂದಿದ್ದು, ಇಬ್ಬರಿಗೂ ಥಳಿಸಿದ ಗ್ರಾಮಸ್ಥರು ಸಾರ್ವಜನಿಕವಾಗಿ ತಲೆ ಬೋಳಿಸಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Related posts

ಗೈರು ಹಾಜರಾದ ವಿದ್ಯಾರ್ಥಿಯಿಂದ ಪರೀಕ್ಷೆ ಬರೆಯಲು ಹಣ ಪಡೆದ ಪ್ರಾಂಶುಪಾಲ..! ಪ್ರಾಂಶುಪಾಲ ಸೇರಿ ಇಬ್ಬರು ಅರೆಸ್ಟ್..!

ಶತಮಾನದ ರೈಲು ದುರಂತದ ಪರಿಹಾರದ ಹಣಕ್ಕಾಗಿ ಸತ್ತು ಬಿದ್ದಿದ್ದ ಅಪರಿಚಿತನ ದೇಹವನ್ನು ‘ಗಂಡ’ ಎಂದು ಕಟ್ಟು ಕಥೆ ಕಟ್ಟಿದ ಮಹಿಳೆ..!ಪತ್ನಿಯನ್ನು ಬಂಧಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿರಾಯ..!

30ಕ್ಕೂ ಹೆಚ್ಚು ಆಟೋಗಳು ಬೆಂಕಿಗಾಹುತಿ..! ಆ ರಾತ್ರಿ ನಡೆದದ್ದಾದರೂ ಏನು..?