ಕ್ರೈಂದೇಶ-ಪ್ರಪಂಚದೇಶ-ವಿದೇಶ

ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದಲ್ಲಿ ಸತ್ತ ಹಾವು ಪತ್ತೆ..! ವಿದ್ಯಾರ್ಥಿ ಮಾಡಿದ ಆ ಪೋಸ್ಟ್ ನಿಂದ ಎಚ್ಚೆತ್ತ ಡಿಸಿ..!

ನ್ಯೂಸ್‌ ನಾಟೌಟ್ : ಬಿಹಾರದ ಎಲ್ಲಾ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಸರ್ಕಾರ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ನೀಡಿದ್ದು, ಕಾಲೇಜಿನಲ್ಲಿ ತಯಾರಾದ ಬಿಸಿಯೂಟ ಸೇವಿಸಿ ಹಲವು ಬಾರಿ ಮಕ್ಕಳು ಅಸ್ವಸ್ಥರಾದ ಘಟನೆ ಬಿಹಾರದ ಬಂಕಾದಲ್ಲಿ ನಡೆದಿದೆ.

ಬಿಹಾರದ ಬಂಕಾದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ರಿಷಿ ಸಿಂಗ್ ಕಾಲೇಜಿನ ಅವ್ಯವಸ್ಥೆಯಿಂದ ಹಿಡಿದು ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾನೆ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಊಟದಲ್ಲಿ ಸತ್ತ ಹಾವು ಇತ್ತು ಎಂದು ತನ್ನ ಸೋಷಿಯಲ್‌ ಮೀಡಿಯಾ ಪೇಜ್ ನಲ್ಲಿ ಬರೆದಿದ್ದಾನೆ.

ಆ ಆಹಾರವನ್ನು ಸೇವಿಸಿದ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದರು ಎಂಬುದಾಗಿ ತಿಳಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಪೋಟೊಗಳನ್ನು ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಬಂಕಾಗೆ ಟ್ಯಾಗ್ ಮಾಡಿದ್ದಾನೆ. ಜೂನ್ 17 ಸೋಮವಾರದಿಂದು ಈ ಘಟನೆ ವರದಿಯಾಗಿದೆ. ಈ ಘಟನೆಯ ನಂತರ ಬಂಕಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಶುಲ್ ಕುಮಾರ್ ಮತ್ತು ಇತರ ಕೆಲವು ಅಧಿಕಾರಿಗಳು ಈ ವಿಷಯವನ್ನು ತನಿಖೆ ಮಾಡಲು ಮೆಸ್ ಗೆ ಭೇಟಿ ನೀಡಿದ್ದಾರೆ ಮತ್ತು ಮೆಸ್ ಮಾಲೀಕರಿಗೆ ದಂಡ ವಿಧಿಸಿದ್ದಾರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/about-darshan-thoogudeepa-from-umapati-kannada-news-statement
https://newsnotout.com/2024/06/darshan-farm-house-case-manager-issue-kannada-news-renukaswami-case
https://newsnotout.com/2024/06/kodagu-well-elephant-issue-forest-department-kannada-news
https://newsnotout.com/2024/06/darshan-and-team-rowdy-contacts-kannada-news

Related posts

ವಿದ್ಯುತ್ ತಂತಿಗೆ ತಾಗುತ್ತಿವೆ ಎಂದು 400 ಬಾಳೆಗಿಡಗಳನ್ನು ಕಡಿದರೇ ಅಧಿಕಾರಿಗಳು? ಈ ಕೃತ್ಯ ನಡೆದದ್ದಾದರೂ ಎಲ್ಲಿ? ಈ ಬಗ್ಗೆ ಸಚಿವರು ಹೇಳಿದ್ದೇನು?

ರೈಲುಗಳ ನಡುವೆ ಢಿಕ್ಕಿ: ಅಪಘಾತದ ತೀವ್ರತೆಗೆ ಭೂಕಂಪನದ ಅನುಭವ..!

ಎಟಿಎಂನಿಂದ ಹಣ ಕದಿಯಲು ಹೊಸ ಕುತಂತ್ರ ಹುಡುಕಿದ ಸೈಬರ್ ಚೋರರು, ಕದ್ದಿದ್ದು ಎಷ್ಟು ಗೊತ್ತಾ?