Latestಕ್ರೈಂವೈರಲ್ ನ್ಯೂಸ್

ಅದು ಸಮ್ಮತಿಯ ಲೈಂಗಿಕ ಕ್ರಿಯೆ ಎಂದ ಅತ್ಯಾಚಾರ ಆರೋಪಿ..! ಪೊಲೀಸ್ ಠಾಣೆ ಪಕ್ಕದಲ್ಲಿ ಸರ್ಕಾರಿ ಬಸ್ ನೊಳಗೆ ನಡೆದಿದ್ದ ಅತ್ಯಾಚಾರಕ್ಕೆ ಟ್ವಿಸ್ಟ್..!

806

ನ್ಯೂಸ್‌ ನಾಟೌಟ್ : “ಅದು ಸಮ್ಮತಿಯ ಲೈಂಗಿಕ ಕ್ರಿಯೆಯಾಗಿತ್ತು, ಅತ್ಯಾಚಾರವಲ್ಲ” ಎಂದು ಪುಣೆ ಅತ್ಯಾಚಾರ ಆರೋಪಿ ದತ್ತಾತ್ರೇಯ ಗಡೆ ನ್ಯಾಯಾಲಯದಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸುಮಾರು 72 ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ ಶುಕ್ರವಾರ(ಫೆ.28) ಬೆಳಗ್ಗೆ ಶಿರೂರು ತಹಸಿಲ್‌ ನಿಂದ ಬಂಧಿಸಲ್ಪಟ್ಟ ಪುಣೆ ಅತ್ಯಾಚಾರ ಆರೋಪಿ ದತ್ತಾತ್ರೇಯ ರಾಮದಾಸ್ ಗಾಡೆಯನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಆರೋಪಿಯನ್ನು ಈಗ 12 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ತನಿಖೆಗಾಗಿ ಪೊಲೀಸರು 14 ದಿನಗಳ ಕಸ್ಟಡಿಗೆ ಕೋರಿದ್ದರು ಆದರೆ 12 ದಿನಗಳ ಕಸ್ಟಡಿಗೆ ನೀಡಲಾಯಿತು. ಈ ಮಧ್ಯೆ, ಆರೋಪಿ ಗಡೆ ಪರ ವಕೀಲರು, ಇದು ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆಯಾಗಿದ್ದು, ಮಹಿಳೆ ಹೇಳಿಕೊಂಡಿರುವಂತೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಮಾ.22 ಕ್ಕೆ ಕರ್ನಾಟಕ ಬಂದ್ ಇದ್ದರೂ ಪರೀಕ್ಷೆ ಮುಂದೂಡಿಕೆ ಇಲ್ಲ ಎಂದ ಶಿಕ್ಷಣ ಸಚಿವ..! ವೇಳಾಪಟ್ಟಿ ಬದಲಾವಣೆ ಆದ್ರೆ ಕಷ್ಟ ಆಗುತ್ತೆ ಎಂದ ಮಧು ಬಂಗಾರಪ್ಪ..!

ಆರೋಪಿಯ ವಿರುದ್ಧ 6 ಕ್ರಿಮಿನಲ್ ಪ್ರಕರಣಗಳಿವೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಂತ್ರಸ್ತೆ ಸ್ವಯಂಪ್ರೇರಣೆಯಿಂದ ಅತ್ಯಾಚಾರ ಘಟನೆ ನಡೆದ ಬಸ್‌ ಗೆ ಪ್ರವೇಶಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಆರೋಪಿಯ ವಿರುದ್ಧ ಈ ಹಿಂದೆ ಆರು ಪ್ರಕರಣಗಳು ದಾಖಲಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಹಿನ್ನೆಲೆಗಳಿವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅತ್ಯಾಚಾರ ಘಟನೆಯ ನಂತರ, ಭಾರಿ ಆಕ್ರೋಶ ಭುಗಿಲೆದ್ದಿತು ಮತ್ತು ಕೋಪಗೊಂಡ ಸ್ಥಳೀಯರು ಸ್ವರ್ಗೇಟ್ ಬಸ್ ಡಿಪೋ ಭದ್ರತಾ ಕ್ಯಾಬಿನ್ ಅನ್ನು ಧ್ವಂಸಗೊಳಿಸಿದ್ದರು. 

See also  ಮಂಗಳೂರಿನ ಕಂಕನಾಡಿಯಲ್ಲಿ ಪತ್ನಿ- ಮಗನಿಗೆ ಚಾಕುವಿನಿಂದ ಇರಿದ ಪತಿ
  Ad Widget   Ad Widget   Ad Widget   Ad Widget   Ad Widget   Ad Widget