Latestರಾಜಕೀಯರಾಜ್ಯಶಿಕ್ಷಣ

ಮಾ.22 ಕ್ಕೆ ಕರ್ನಾಟಕ ಬಂದ್ ಇದ್ದರೂ ಪರೀಕ್ಷೆ ಮುಂದೂಡಿಕೆ ಇಲ್ಲ ಎಂದ ಶಿಕ್ಷಣ ಸಚಿವ..! ವೇಳಾಪಟ್ಟಿ ಬದಲಾವಣೆ ಆದ್ರೆ ಕಷ್ಟ ಆಗುತ್ತೆ ಎಂದ ಮಧು ಬಂಗಾರಪ್ಪ..!

679
Spread the love

ನ್ಯೂಸ್‌ ನಾಟೌಟ್ : ಮಾ.22 ರಂದು‌ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು (Exams) ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈಗಾಗಲೇ ಮಾ.22 ರಂದು 7,8,9ನೇ ತರಗತಿ ಪರೀಕ್ಷೆಗಳ ನಿಗದಿಯಾಗಿದೆ. ಬಂದ್ ಎಂದು ಈಗ ಮುಂದೂಡಿಕೆ ಸಾಧ್ಯವಿಲ್ಲ. ಬಂದ್ ಇದ್ದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡೋದಿಲ್ಲ. ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದೇ ಇರೋ ರೀತಿ ಬಂದ್ ಮಾಡೋರು ಸಹಕಾರ ಕೊಡ್ತಾರೆ. ಹೋರಾಟಗಾರರಿಗೆ ಮನವಿ ಮಾಡ್ತೀನಿ. ಹೋರಾಟ ಮಾಡೋಕೆ ನಿಮಗೆ ಹಕ್ಕು ಇದೆ. ಆದರೆ ಪರೀಕ್ಷೆ ಅನ್ನೋದು ಮಕ್ಕಳಿಗೆ ಮುಖ್ಯ. ಮಕ್ಕಳ ಭವಿಷ್ಯ ಪರೀಕ್ಷೆಯಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ಅಡಚಣೆ ಮಾಡೋದಿಲ್ಲ ಎಂಬ ವಿಶ್ವಾಸ ಇದೆ ಎಂದಿದ್ದಾರೆ.

ಇದನ್ನೂ ಓದಿ:ಅಮೆರಿಕ ಮತ್ತು ಉಕ್ರೇನ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ..! ನೀವೇ 3ನೇ ಮಹಾಯುದ್ಧಕ್ಕೆ ಕಾರಣರಾಗುತ್ತೀರಿ ಎಂದು ಎಚ್ಚರಿಸಿದ ಟ್ರಂಪ್..! ವಿಡಿಯೋ ವೈರಲ್

ಬಂದ್ ಮಾಡುವ ಹೋರಾಟಗಾರರು ಯಾರು ಎಕ್ಸಾಂಗೆ ಹೋಗಬೇಡಿ ಎಂದು ಮಕ್ಕಳಿಗೆ ಹೇಳೋದಿಲ್ಲ. ಮಕ್ಕಳು ಗೊಂದಲ ಆಗೋದು ಬೇಡ. 6,7,8,9 ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತವೆ. ಮಕ್ಕಳು ಎಕ್ಸಾಂ ಬರೆಯಲಿ. ಈಗಾಗಲೇ ವೇಳಾಪಟ್ಟಿ ಸಿದ್ಧತೆ ಮಾಡಿ ಪ್ರಕಟ ಮಾಡಿದ್ದೇವೆ‌. ವೇಳಾಪಟ್ಟಿ ಬದಲಾವಣೆ ಆದ್ರೆ ಕಷ್ಟ ಆಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

See also  ಭಾರಿ ಚರ್ಚೆಗೆ ಕಾರಣವಾದ ಭವಾನಿ ರೇವಣ್ಣರವರ 1.5 ಕೋಟಿ ರೂ.ಕಾರು ಯಾರದ್ದು?ಈ ದುಬಾರಿ ಕಾರಿನ ಹಿಂದಿರುವ ಕಥೆ ಏನು?ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಗರಂ ಆಗಿದ್ಯಾಕೆ?
  Ad Widget   Ad Widget   Ad Widget   Ad Widget