ಕ್ರೈಂವೈರಲ್ ನ್ಯೂಸ್

‘ಸಾಕುವ ಶಕ್ತಿ ನನಗಿಲ್ಲ, ಗರ್ಭಪಾತಕ್ಕೆ ಅನುಮತಿ ನೀಡಿ’ ಎಂದ ತಾಯಿ..! ಈ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ನ್ಯೂಸ್ ನಾಟೌಟ್ : ಗರ್ಭಪಾತಕ್ಕೆ ಅನುವು ಮಾಡಿಕೊಟ್ಟು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ತ್ರಿಸದಸ್ಯ ಪೀಠ, ‘ನಾವು ಮಗುವನ್ನು ಕೊ* ಲ್ಲಲು ಸಾಧ್ಯವಿಲ್ಲ’ ಎಂದು ಮೌಖಿಕವಾಗಿ ಹೇಳಿದೆ.

ಕೇಂದ್ರ ಸರ್ಕಾರದ ಅರ್ಜಿಗೆ ಬುಧವಾರ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿತ್ತು.

ಈ ವೇಳೆ ಪೀಠವು, ‘ಇನ್ನೂ ಹುಟ್ಟಿಲ್ಲದ ಜೀವಂತ ಮಗುವಿನ ಹಕ್ಕು ಹಾಗೂ ಅದರ ತಾಯಿಗೆ ತನ್ನ ದೇಹದ ಮೇಲಿರುವ ಹಕ್ಕು ಎರಡರ ನಡುವೆ ನಾವು ಸಮತೋಲನ ಸಾಧಿಸಬೇಕಿದೆ. ಆರೋಗ್ಯವಂತ ಮಗುವಾಗಿ ಹುಟ್ಟಬಹುದಾದ ಭ್ರೂಣವನ್ನು ನಾವು ಕೊ* ಲ್ಲಲು ಸಾಧ್ಯವಿಲ್ಲ ಎಂದು ಹೇಳಿದೆ.

26 ವಾರಗಳ ಕಾಲ ಮಗುವನ್ನು ಹೊಟ್ಟೆಯಲ್ಲಿರಿಸಿಕೊಂಡ ಮಹಿಳೆಗೆ ಇನ್ನು ಕೆಲವು ವಾರಗಳ ಕಾಲ ಕಾಯಲು ಸಾಧ್ಯವೇ ಎಂದು ಕೇಳಿ’ ಎಂದು ಆಕೆಯ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

‘ಈ ಮಗು ನನಗೆ ಬೇಡ. ನಾನು ಖಿನ್ನತೆ (Depression)ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೇನೆ. 3ನೇ ಮಗು ಸಾಕುವ ಶಕ್ತಿ ನನಗಿಲ್ಲ. ಗರ್ಭಪಾತಕ್ಕೆ ಅನುಮತಿ ನೀಡಿ’ ಎಂದು 27 ವರ್ಷದ ಮಹಿಳೆಯೊಬ್ಬರು ಹೂಡಿರುವ ದಾವೆಗೆ ಸುಪ್ರಿಂ ಕೋರ್ಟ್ ಈ ರೀತಿಯ ಉತ್ತರ ನೀಡಿದೆ.

Related posts

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಮಸಿದಿಗೆ ಅಡಿಪಾಯ ಹಾಕ್ತಾರಾ? ಇಂಡಿಯನ್ ಮುಸ್ಲಿಂ ಲೀಗ್ ಪ್ರಧಾನಿ ಬಳಿ ವಿನಂತಿಸಿಕೊಂಡದ್ದೇನು?

ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ಟೇಬಲ್ ಮೇಲೆ ಹಾವು ಬಿಟ್ಟ ವ್ಯಕ್ತಿ! ಪಾಲಿಕೆ ಅಧಿಕಾರಿಗಳು ಮಾಡಿದ್ದೇನು? ಇಲ್ಲಿದೆ ವೈರಲ್ ವಿಡಿಯೋ

ಪ್ರಮೋಷನ್ ಗಾಗಿ ಹೆಂಡತಿಯನ್ನು ಬಾಸ್ ಜೊತೆ ಮಲಗಲು ಹೇಳಿದ ಭೂಪ! ಮುಂದೆ ನಡೆದದ್ದೇ ರೋಚಕ..!