ಕ್ರೈಂದೇಶ-ವಿದೇಶವೈರಲ್ ನ್ಯೂಸ್

20ರ ಯುವತಿಯನ್ನು ಇರಿದು ಕೊಂದ ಪ್ರಿಯಕರ..! ಶವವನ್ನು ಪೊದೆಯಲ್ಲಿ ಎಸೆದು ಪರಾರಿ..!

ನ್ಯೂಸ್‌ ನಾಟೌಟ್‌: 20 ವರ್ಷದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಇರಿದು ಕೊಂದು ಶವವನ್ನು ನವಿ ಮುಂಬೈನ ರೈಲ್ವೆ ನಿಲ್ದಾಣದ ಬಳಿಯ ಪೊದೆಗಳಲ್ಲಿ ಎಸೆದ ಘಟನೆ ಶನಿವಾರ(ಜು.28) ಬೆಳಕಿಗೆ ಬಂದಿದೆ.

ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಉರಾನ್ ‘ರೈಲು ನಿಲ್ದಾಣದ ಬಳಿಯ ಪೊದೆಗಳಲ್ಲಿ ಹುಡುಗಿಯ ಮೃತದೇಹ ಪತ್ತೆಯಾಗಿದೆ. ರಾತ್ರಿ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಈ ವೇಳೆ ದೇಹದ ಮೇಲೆ ಅನೇಕ ಗಾಯದ ಗುರುತುಗಳು ಆಗಿದ್ದವು. ಅದಲ್ಲದೆ, ಚೂರಿ ಇರಿತದ ಗುರುತುಗಳು ಪತ್ತೆಯಾಗಿದ್ದವು’ ಎಂದು ಹೇಳಿದ್ದಾರೆ.

ಕೊಲೆಯಾದ ಮಹಿಳೆಯನ್ನು ಯಶಶ್ರೀ ಶಿಂಧೆ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ಕೂಡ ದಾಖಲಾಗಿತ್ತು. 20 ವರ್ಷದ ಯುವಕ ಊರನ್ ನಿವಾಸಿಯಾಗಿದ್ದು, ಸುಮಾರು 25 ಕಿ.ಮೀ ದೂರದ ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಪ್ರೇಮ ಸಂಬಂಧದ ವಿಚಾರಕ್ಕಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ತನಿಖೆ ಮತ್ತಷ್ಟು ಚುರುಕುಗೊಳಿಸಲಾಗಿದೆ.

Click

https://newsnotout.com/2024/07/jail-kannada-news-notice-siddarooda-jail-kannada-news/
https://newsnotout.com/2024/07/police-kannada-news-hospital-bengaluru-case/

Related posts

‘ಸೌಜನ್ಯ’ ಎಂಬ ಹೆಣ್ಣಿನ ಪರ ಧ್ವನಿ ಎತ್ತದ ನಾಯಕರಿಗೆ ನೋಟಾವೇ ಅಸ್ತ್ರ..! ದಕ್ಷಿಣ ಕನ್ನಡ ಜಿಲ್ಲೆಯ ಎಷ್ಟು ಜನರ ಸಮ್ಮತವಿದೆ..? ಜನಾಂದೋಲದ ಲಿಂಕ್ ಒತ್ತಿ – ವೋಟ್ ಮಾಡಿ ತಿಳಿಸಿ

ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ಕಳೆದ 4 ತಿಂಗಳ ಅಂತರದಲ್ಲಿ ಇದು 2ನೇ ಭೇಟಿ

ಉಡುಪಿಯ ತ್ರಾಸಿ ಬೀಚ್‌ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ ..! ಪ್ರವಾಸಿಗ ಪಾರು, ಬೋಟ್ ರೈಡರ್ ಕಣ್ಮರೆ..!