ಕ್ರೈಂಬೆಂಗಳೂರು

ಮನೆಯೊಂದರ ಶೆಡ್‌ ನಲ್ಲಿ ಕಟ್ಟಿ ಹಾಕಿ ನಾಯಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ವ್ಯಕ್ತಿ..! ದೂರು ದಾಖಲು

ನ್ಯೂಸ್ ನಾಟೌಟ್ : ನಾಯಿಯ ಮೇಲೆ ಯುವಕನೋರ್ವ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.

ನೆರೆಮನೆಯ ಯುವಕ ಮನೋಜ್ ಕುಮಾರ್ ಕೃತ್ಯವೆಸಗಿರುವುದಾಗಿ ಆರೋಪಿಸಲಾಗಿದೆ. ಮನೆಯೊಂದರ ಶೆಡ್‌ ನಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಮನೋಜ್ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡು ನಿತ್ರಾಣವಾಗಿದ್ದ ನಾಯಿ 2-3 ದಿನಗಳಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ. ಸಿಸಿಟಿವಿ ಪರಿಶೀಲನೆ ವೇಳೆ ಯುವಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

ಘಟನೆಯ ಬಗ್ಗೆ ವಿಚಾರಿಸಿದಾಗ ನಾಯಿ ಕೋಳಿ ಹಿಡಿದ ವಿಚಾರಕ್ಕೆ ಈ ರೀತಿ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ. ತನ್ನ ಕೋಳಿಯನ್ನು ನಾಯಿ ಹಿಡಿದಿದೆ ಎಂದು ಯುವಕ ಹೇಳಿದ್ದಾನೆ. ಅದೇ ವಿಚಾರಕ್ಕೆ ನಾಯಿಯ ತಲೆಗೆ ಹೊಡೆದು ಯುವಕ ಗಾಯಗೊಳಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಟ್ಯಾಗ್ ಮಾಡಿ ದೂರು ನೀಡಲಾಗಿದೆ.

Click

https://newsnotout.com/2025/01/instagram-love-by-16-and-10-year-old-childs-news-s/
https://newsnotout.com/2025/01/bengaluru-8-month-old-baby-got-influenced-by-hmpv-viral-bengaluru/

Related posts

ಸೋಶಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಪೋಸ್ಟ್ ಮಾಡೋರೆ ಎಚ್ಚರ:ಹದ್ದಿನ ಕಣ್ಣಿಟ್ಟಿದ್ದಾರೆ ಪೊಲೀಸರು,ಸಿಕ್ಕಿಬಿದ್ರೆ ಸೀದಾ ಸ್ಟೇಶನ್‌ಗೆ ಹೋಗ್ತಿರಾ ಹುಷಾರ್..!

ಕಾಲೇಜಿನಲ್ಲೇ ಯುವಕ-ಯುವತಿಯ ಲವ್ವಿ ಡವ್ವಿ, ವಿಡಿಯೋ ವೈರಲ್ , ಸರಸ ಸಲ್ಲಾಪದಲ್ಲಿದ್ದ ಜೋಡಿಯ ವಿಡಿಯೋ ಮಾಡಿದ ವಿದ್ಯಾರ್ಥಿಗಳು

ಮಂಗಳೂರಿನಲ್ಲಿ ಗಾಂಜಾ ದಂಧೆ ಬಯಲು: ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ ೧೦ ಮಂದಿ ಆರೋಪಿಗಳ ಬಂಧನ