ರಾಜ್ಯವೈರಲ್ ನ್ಯೂಸ್

ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ..! ಹಾಜರಾತಿ ಹೆಚ್ಚಿಸಲು ವಿನೂತನ ಪ್ರಯತ್ನ

ನ್ಯೂಸ್ ನಾಟೌಟ್: ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬ ದೂರುಗಳಿವೆ. ಈ ಮಧ್ಯೆ ಇಲ್ಲೊಂದು ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳ ಹಾಜರಾತಿ ಹೆಚ್ಚಿಸುವ ಸಲುವಾಗಿ ವಿನೂತನ ಪ್ರಯತ್ನ ಮಾಡಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ.

ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ ಸಿಕ್ಕಿದೆ. ನಿಯಮಿತವಾಗಿ ಶಾಲೆ ಬರುತ್ತಿದ್ದ ಒಟ್ಟು 17 ವಿದ್ಯಾರ್ಥಿಗಳು ಆಯ್ಕೆ ಮಾಡಲಾಗಿದ್ದು, ಎರಡೂವರೆ ಲಕ್ಷ ರೂ. ಖರ್ಚು ಮಾಡಿ ಶಿಕ್ಷಕ ಪ್ರಕಾಶ್ ದೇವಣ್ಣವರ್ ಎಂಬವರು​ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.

ಶಿಕ್ಷಕ ಪ್ರಕಾಶ್ ದೇವಣ್ಣವರ್​​ ವಿದ್ಯಾರ್ಥಿಗಳಿಂದ ತಲಾ ಮೂರು ಸಾವಿರ ರೂ. ಹಣ ಪಡೆದುಕೊಂಡಿದ್ದು, ಇನ್ನೂಳಿದ ಎರಡು ಲಕ್ಷ ರೂ. ಸ್ವಂತ ಹಣ ಖರ್ಚು ಹಾಕಿದ್ದಾರೆ. ಎರಡು ದಿನದ ಪ್ರವಾಸ ಇದಾಗಿತ್ತು, ನಿನ್ನೆ(ನ.7) ಸಂಜೆ ಬೆಳಗಾವಿಯಿಂದ ಹೈದರಾಬಾದ್ ಗೆ ಹೋಗಿರುವ ಮಕ್ಕಳು. ಹೈದ್ರಾಬಾದ್ ​​ನಲ್ಲಿ ರಾಮೋಜಿ ಫಿಲ್ಮ್ ಸಿಟಿ, ಚಾರ್ ಮಿನಾರ್, ಗೋಲ್ಕೊಂಡ ಕೋಟೆ ಸೇರಿ ಹಲವು ಕಡೆ ಪ್ರವಾಸ ಮಾಡಲಿದ್ದಾರೆ. ಬಳಿಕ ನಾಳೆ ಬೆಳಗಾವಿಗೆ ವಾಪಾಸ್ ಆಗಲಿದ್ದಾರೆ ಎಂದು ವರದಿ ತಿಳಿಸಿದೆ.

Related posts

ದೇವಸ್ಥಾನದ ಧರ್ಮದರ್ಶಿಯನ್ನು ಎರಡೂವರೆ ವರ್ಷಗಳಿಂದ ಸಂಚು ಹಾಕಿ ಹತ್ಯೆ..! ಆತನ ಪೂಜಾ ವಿಧಾನಕ್ಕೂ ಕೊಲೆಗೂ ಇತ್ತು ನಿಗೂಢ ಸಂಬಂಧ..!

ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಕಂಟೈನರ್‌ ನಿಂದ ಎತ್ತಿ ಎಸೆದು ಕೊಂದ ಪಾಕ್ ಸೇನೆ..! ಇಸ್ಲಾಮಾಬಾದ್‌ ನಲ್ಲಿ ತೀವ್ರಗೊಂಡ ಹಿಂಸಾಚಾರ..! ಇಲ್ಲಿದೆ ವೈರಲ್ ವಿಡಿಯೋ

ಗಣರಾಜ್ಯೋತ್ಸವದ ಹಿನ್ನೆಲೆ 2025ರ ಪದ್ಮಪ್ರಶಸ್ತಿ ಘೋಷಣೆ, ನಟ ಅನಂತನಾಗ್ ಗೆ ಪದ್ಮ ಭೂಷಣ ಗೌರವ