ಕ್ರೈಂವೈರಲ್ ನ್ಯೂಸ್

70,000 ರೂ.ನಂತೆ 1,500 ಮಂದಿಗೆ ನಕಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಮಾರಾಟ..! 13 ಮಂದಿ ಅರೆಸ್ಟ್..!

ನ್ಯೂಸ್ ನಾಟೌಟ್ : ನಕಲಿ (ಡಾಕ್ಟರ್) ಬಿಇಎಂಎಸ್ ಪದವಿ ಪ್ರಮಾಣ ಪತ್ರ ನೀಡಿ, ನಕಲಿ ವೈದ್ಯರನ್ನು ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಗುಜರಾತ್‌ ನ ಸೂರತ್‌ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ನಕಲಿ ಪದವಿ ಪಡೆದು ಆಸ್ಪತ್ರೆ ನಡೆಸುತ್ತಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ವಿವಿಧ ಸ್ಥಳಗಳಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಬಂಧಿತರ ವಿರುದ್ಧ ಗುಜರಾತಿನ ಮೆಡಿಕಲ್ ಪ್ರಾಕ್ಟೀಷನರ್ಸ್ ಆಕ್ಟ್ (ಜಿಎಂಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌

ಮೂರು ಜನ ಆರೋಪಿಗಳು ಸೂರತ್‌ ನಲ್ಲಿ ನಕಲಿ ಬ್ಯಾಚುಲರ್ ಆಫ್ ಎಲೆಕ್ಟ್ರೋ-ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ (ಬಿಇಎಂಎಸ್) ಪದವಿ ಪ್ರಮಾಣಪತ್ರವನ್ನು ಜನರಿಗೆ ನೀಡುತ್ತಿದ್ದರು. ದಾಳಿ ವೇಳೆ ನಕಲಿ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ಕ್ಲಿನಿಕ್‌ ಗಳಿಂದ ಅಲೋಪತಿ ಮತ್ತು ಹೋಮಿಯೋಪತಿ ಔಷಧಗಳು, ಚುಚ್ಚುಮದ್ದು, ಸಿರಪ್ ಬಾಟಲಿಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಮೂವರು ಆರೋಪಿಗಳು ಬೋರ್ಡ್ ಆಫ್ ಎಲೆಕ್ಟ್ರೋ ಹೋಮಿಯೋಪತಿಕ್ ಮೆಡಿಸಿನ್ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ನಡೆಸುತ್ತಿದ್ದರು. ಅದರಲ್ಲಿ ನಕಲಿ ಬಿಇಎಂಎಸ್ ಪದವಿ ಪ್ರಮಾಣ ಪತ್ರವನ್ನು 70,000 ರೂ.ಗೆ ಮಾರಾಟ ಮಾಡುತ್ತಿದ್ದರು. ಸುಮಾರು 1,500 ವ್ಯಕ್ತಿಗಳಿಗೆ ಇಂತಹ ಪ್ರಮಾಣಪತ್ರ ಮಾರಾಟ ಮಾಡಿದ್ದಾರೆ. ಇವುಗಳಲ್ಲಿ ಕೇವಲರು 10ನೇ ತರಗತಿ ತೇರ್ಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/12/google-map-issue-bhimagada-kannada-news-viral-news-7-to-8-km-v/
https://newsnotout.com/2024/12/udupi-manipala-kannada-news-nomore-kasaragodu/
https://newsnotout.com/2024/12/kannada-news-video-marriage-function-free-meal-issue/

Related posts

ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ..! ಪವಾಡದಂತೆ ಪಾರಾಗಿದ್ದೇಗೆ..?

ಪ್ರಜ್ಞೆ ತಪ್ಪಿ ಕುಸಿದುಬಿದ್ದ ಆ ಬಿಗ್ ಬಾಸ್ ಸ್ಪರ್ಧಿ ಯಾರು..? ಆಸ್ಪತ್ರೆಗೆ ದಾಖಲು..!

ಒಡಿಶಾದಲ್ಲಿ ಮತ್ತೊಂದು ಭೀಕರ ರೈಲು ದುರಂತ: ರೈಲ್ವೆ ಕೋಚ್‌ ಕೆಳಗೆ ಸಿಲುಕಿ ನಾಲ್ವರು ಸಾವು