ಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಗೋಧಿ ಕಟಾವು ಮಷಿನ್‌ ನೊಳಗೆ ಸಿಲುಕಿದ ಬಾಲಕ..! 14ರ ಹುಡುಗನ ದೇಹ ಛಿದ್ರ-ಛಿದ್ರ ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಗೋಧಿ ಕಟಾವು ಮಷಿನ್‌ ಒಳಗೆ ಸಿಲುಕಿ 14 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಇಂದು(ಎ.೨೪) ನಡೆದಿದೆ. ಈ ಭೀಕರ ಘಟನೆಯಲ್ಲಿ ಬಾಲಕನ ದೇಹ ಛಿದ್ರಗೊಂಡಿದ್ದು, ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

14 ವರ್ಷದ ಬಾಲಕ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಗೋಧಿ ಕಟಾವು ಯಂತ್ರವನ್ನು ನಿರ್ವಹಿಸುತ್ತಿದ್ದ. ಆದರೆ, ಏಕಾಏಕಿ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಯಂತ್ರದ ಮೇಲೆ ಇಟ್ಟಿದ್ದ ಟಾರ್ಪಾಲಿನ್ ಹಾರಿ ಹೋಗಿದೆ. ಪರಿಣಾಮ ಟಾರ್ಪಾಲ್​​ ಸಮೇತ ಬಾಲಕ ಕಟಾವು ಯಂತ್ರದೊಳಗೆ ಬಾಲಕ ಬಿದ್ದಿದ್ದಾನೆ. ಬಾಲಕ ಕಿರುಚುವ ಧ್ವನಿ ಕೇಳುತ್ತಿದ್ದಂತೆ ಅಕ್ಕಪಕ್ಕದ ಜಮೀನಿನಲ್ಲಿದ್ದ ಗ್ರಾಮಸ್ಥರು ಓಡೋಡಿ ಬಂದಿದ್ದರು ಕೂಡ ಅಷ್ಟೋತ್ತಿಗಾಗಲೇ ಬಾಲಕನ ದೇಹ ಛಿದ್ರಗೊಂಡಿದೆ.

ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಂತ್ರದ ಬಳಿ ತಲುಪಿದಾಗ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Related posts

2 ಲಕ್ಷ ಬಹುಮಾನಕ್ಕಾಗಿ ಒಮ್ಮೆಲೇ ಒಂದು ಲೀಟರ್ ಮದ್ಯ ಕುಡಿದ ವ್ಯಕ್ತಿ..! ದುರಂತ ಅಂತ್ಯಕ್ಕೆ ಕಾರಣವಾಯ್ತಾ ಮಾಲೀಕ ನೀಡಿದ ಪಾರ್ಟಿ?

ಆಲೆಟ್ಟಿ: ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ಪ್ರಕರಣ, ಹಲವು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ರಿಕ್ಷಾ ಚಾಲಕ ಸಾವು..!

ಆಸ್ಪತ್ರೆಗೆ ಬಾಂಬ್​ ಬೆದರಿಕೆ..! ರೋಗಿಗಳನ್ನು ಹೊರಗೆ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ..!