Latestಕ್ರೈಂವೈರಲ್ ನ್ಯೂಸ್

ರೇಡ್ ಆಗುತ್ತಿದ್ದಂತೆ ಕಿಟಕಿಯಲ್ಲಿ ಕಂತೆ, ಕಂತೆ ನೋಟು ಎಸೆದ ಸರ್ಕಾರಿ ನೌಕರ..! ಸುಮಾರು 2 ಕೋಟಿ ರೂಪಾಯಿ ವಶಕ್ಕೆ..!

849

ನ್ಯೂಸ್ ನಾಟೌಟ್: ಒಡಿಶಾದಲ್ಲಿ ಇಂದು(ಮೇ.30) ವಿಜಿಲೆನ್ಸ್‌ (ವಿಚಕ್ಷಣ) ಅಧಿಕಾರಿಗಳು ದಾಳಿ ಮಾಡಿದ್ದು, ದೊಡ್ಡ ಪ್ರಮಾಣದ ಹಣ ಮತ್ತು ಆರೋಪಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಈ ಸರ್ಕಾರಿ ನೌಕರನ ಭುವನೇಶ್ವರದ ಫ್ಲಾಟ್‌ ನಲ್ಲಿ ಒಂದು ಕೋಟಿ ರೂಪಾಯಿ ನಗದು ಜಪ್ತಿಯಾಗಿದೆ, ಇನ್ನೊಂದೆಡೆ ಅಂಗೂಲ್ ಜಾಗದ ಮನೆಯಲ್ಲಿ 1.1 ಕೋಟಿ ರೂಪಾಯಿ ನಗದು ಸಿಕ್ಕಿದೆ.

ಒಡಿಶಾದ ಗ್ರಾಮೀಣಾಭಿವೃದ್ದಿ ಇಲಾಖೆಯ ಮುಖ್ಯ ಇಂಜಿನಿಯರ್ ಬೈಕುನಾಥ್ ನಾಥ ಸಾರಂಗಿ ಮನೆ ಮೇಲೆ ವಿಜಿಲೆನ್ಸ್ ರೇಡ್ ಆಗಿದೆ. ಕೂಡಲೇ ಚೀಫ್ ಇಂಜಿನಿಯರ್‌ ಕೋಟ್ಯಾಂತರ ರೂಪಾಯಿ ನೋಟಿನ ಕಂತೆಯನ್ನು ಕಿಟಕಿ ಮೂಲಕ ಹೊರಗೆ ಎಸೆದಿದ್ದಾನೆ.

ವಿಜಿಲೆನ್ಸ್‌ ಅಧಿಕಾರಿಗಳ ರೇಡ್ ವೇಳೆ 500 ರೂಪಾಯಿ ನೋಟುಗಳ ಕಂತೆಯನ್ನು ಮುಖ್ಯ ಇಂಜಿನಿಯರ್ ಬೈಕುನಾಥ್ ನಾಥ ಸಾರಂಗಿ ಕಿಟಕಿಯಿಂದ ಹೊರಗೆ ಎಸೆದಿದ್ದು ಗೊತ್ತಾಗಿದೆ, ಆತನನ್ನು ವಶಕ್ಕೆ ಪಡೆಯಲಾಗಿದೆ.

ಚೀಫ್‌ ಇಂಜಿನಿಯರ್ ಪ್ಲ್ಯಾಟ್‌ ನ ಕಿಟಕಿಯಿಂದ ಹೊರಗೆ ಎಸೆದ ಹಣವನ್ನು ವಿಜಿಲೆನ್ಸ್ ಅಧಿಕಾರಿಗಳು ಕೂಡಲೇ ವಶಪಡಿಸಿಕೊಂಡಿದ್ದಾರೆ. ಈಗ ಸುಮಾರು 2 ಕೋಟಿ ರೂಪಾಯಿ ನಗದು ಸೇರಿದಂತೆ ಪ್ಲ್ಯಾಟ್ ಮತ್ತು ಮನೆಯಲ್ಲಿ ಸಿಕ್ಕ ಹಣವನ್ನು ಎಣಿಸುವ ಕಾರ್ಯ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

ಮಂಗಳೂರು: ತಾಯಿಯೊಂದಿಗೆ ಗುಡ್ಡ ಕುಸಿತದ ಅವಶೇಷದಡಿ ಸಿಲುಕಿದ್ದ ಮತ್ತೊಂದು ಮಗುವೂ ಸಾವು..! ಒಟ್ಟು ಮೂವರು ಬಲಿ..!

See also  ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ಕಿರುಕುಳ ಕೇಸ್: ಆರೋಪಿಯ ಪತ್ನಿ ಸೇರಿದಂತೆ ಇಬ್ಬರು ಅರೆಸ್ಟ್
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget