ಕ್ರೈಂ

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ಕಿರುಕುಳ ಕೇಸ್: ಆರೋಪಿಯ ಪತ್ನಿ ಸೇರಿದಂತೆ ಇಬ್ಬರು ಅರೆಸ್ಟ್

724

ಮಂಗಳೂರು: ಇಂಟರ್ನ್ ಶಿಪ್ ನಲ್ಲಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ಭಟ್​​ಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಆತನ ಪತ್ನಿ ಶಶಿಕಲಾ ಹಾಗೂ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ಭಟ್​​ನನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಆರೋಪಿ ನ್ಯಾಯವಾದಿ ಕೆಎಸ್ಎನ್ ರಾಜೇಶ್ ಭಟ್ ಕಾನೂನು ವಿದ್ಯಾರ್ಥಿನಿಗೆ ತನ್ನ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಅ.18ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕದಿಂದ ಆರೋಪಿ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದಾನೆ. ಅರೆಸ್ಟ್ ಆದ ಇಬ್ಬರೂ ಕೂಡ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆರೋಪಿಯನ್ನು ಹಿಡಿಯುವುದು ಬಿಟ್ಟು ಉಳಿದವರನ್ನು ಬಂಧಿಸಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ಪೊಲೀಸರು ತಮ್ಮ ಸ್ವಂತ ವಾಹನದ ಮೇಲೆ 'ಪೊಲೀಸ್'​ ಎಂದು ಬರೆಸುವಂತಿಲ್ಲ ಎಂದ ಗೃಹ ಸಚಿವ..! ಕಾನೂನು ಕ್ರಮದ ಎಚ್ಚರಿಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget