ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಸ್‌ ಸೀಟಿಗಾಗಿ ದಂಪತಿಗೆ ಮನಸೋ ಇಚ್ಛೆ ಥಳಿಸಿದ ಯುವಕರ ತಂಡ..! ಸರ್ಕಾರಿ ಬಸ್ ಗೆ ಅಡ್ಡಗಟ್ಟಿ ಗರ್ಭಿಣಿ ಎಂದೂ ನೋಡದೆ ಹಲ್ಲೆ..!

ನ್ಯೂಸ್ ನಾಟೌಟ್: ಬಸ್ ಸೀಟಿಗಾಗಿ ಜಗಳ ಶುರುವಾಗಿ ವಿಕೋಪಕ್ಕೆ ತಿರುಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ನಡೆದಿದೆ. ಯುವಕರ ಗುಂಪೊಂದು ಗಂಡ ಹೆಂಡತಿಗೆ ಮನಸೋ ಇಚ್ಚೆ ಹೊಡೆದಿದ್ದಾರೆ.

ಗರ್ಭಿಣಿ ಎಂದು ನೋಡದೆ ಮನಸೋ‌ ಇಚ್ಚೆ ಹೊಡೆಯಲಾಗಿದೆ. ನನ್ನ ತಂದೆ‌-ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಮಗಳು ಕಣ್ಣೀರು ಹಾಕಿದ್ದಾಳೆ. ನನ್ನ ಪತಿಗೆ ಹೊಡೆಯಬೇಡಿ ಎಂದು ಬಿಡಿಸಲು ಹೋದ ಪತ್ನಿಯ ಮೇಲೂ ಹಲ್ಲೆ ಮಾಡಲಾಗಿದೆ. ಪರಪ್ಪ ಶಿವಪ್ಪ ನಾಸಿಪುಡಿ, ಹಾಗೂ ಪತ್ನಿ ಸುನಿತಾ ಮೇಲೆ ಹಲ್ಲೆ ಮಾಡಲಾಗಿದೆ.

ಸಂಕೇಶ್ವರದಿಂದ ಗೋಕಾಕ್ ಗೆ ಹೊರಟಿದ್ದ ಬಸ್‌ ನಲ್ಲಿ ಗಲಾಟೆ ನಡೆದಿದೆ.  ಬಸ್‌ ನಲ್ಲಿ ಸೀಟು ವಿಚಾರಕ್ಕೆ ದಂಪತಿಯೊಂದಿಗೆ ಇಬ್ಬರು ಮಹಿಳೆಯರ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಬಸ್‌ ನಲ್ಲಿದ್ದ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಮಹಿಳೆಯರು ಮನೆಯವರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಹತ್ತಕ್ಕೂ ಹೆಚ್ಚು ಯುವಕರ ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.. ಬೈಕ್ ನಲ್ಲಿ ಬಂದ ಯುವಕರ ತಂಡ ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ದಂಪತಿಗೆ ಹಲ್ಲೆ ಮಾಡಿದೆ. ಪತಿ ಹಾಗೂ ಪತ್ನಿ ಇಬ್ಬರನ್ನೂ ಬಸ್ಸಿನಿಂದ ಕೆಳಗೆಳೆದು ಮನ ಬಂದಂತೆ ಹೊಡೆದಿದ್ದಾರೆ.

ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಸಂಕೇಶ್ವರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Click

https://newsnotout.com/2024/12/mangaluru-real-stra-uppendra-temple-run-ui-cinema-d/
https://newsnotout.com/2024/12/tamilnadu-cyclon-forest-minister-visit-viral-news-d/
https://newsnotout.com/2024/12/mysore-chamundi-betta-kananda-news-viral-news-d-rain/
https://newsnotout.com/2024/12/case-udupi-kundapura-warrant-court-bigboss/
https://newsnotout.com/2024/12/sea-kannada-news-viral-video-russian-actress-d/
https://newsnotout.com/2024/12/chatrapati-shivaji-film-by-rishab-shetty-kannada-news-telugu/
https://newsnotout.com/2024/12/kaadaba-man-suspence-case-revealed-viral-news-police/
https://newsnotout.com/2024/12/karimani-kannada-news-atm-theft-viral-news-krishna/

Related posts

4 ತಿಂಗಳ ಗರ್ಭಿಣಿ ಪತ್ನಿಯನ್ನು ಹತ್ಯೆಗೈದ ಪತಿ..! ಗಂಡನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲು..!

75 ವರ್ಷದ ನಿಸ್ಸಹಾಯಕ ವೃದ್ಧೆಯ ಮೇಲೆ ಭಿಕ್ಷಾಟನೆ ಮಾಡುತ್ತಿದ್ದ ಯುವಕನಿಂದ ಅತ್ಯಾಚಾರ..! ಯುವಕನಿಗಾಗಿ ತೀವ್ರ ಶೋಧ

ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬಡವರಿಂದ ಯದ್ವಾತದ್ವಾ ಹಣ ಪೀಕುತ್ತಿರುವ ಗ್ರಾಮ ವನ್ ಗಳು..!, ಸುಳ್ಯ ತಾಲೂಕಿನ ಬಡ ಜನರನ್ನು ಹಗಲು ದರೋಡೆ ಮಾಡುತ್ತಿರುವವರಿಗೆ ಕಡಿವಾಣ ಹಾಕೋದು ಯಾರು..?