ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ನಟ ದರ್ಶನ್, ಅಭಿಷೇಕ್ ಅಂಬರೀಷ್ ಸೇರಿ ಹಲವರ ವಿರುದ್ಧ ಪೊಲೀಸರಿಂದ ನೋಟೀಸ್ ಜಾರಿ..! ಅಷ್ಟಕ್ಕೂ ರಾತ್ರಿ ಪಬ್ ಪಾರ್ಟಿಯಲ್ಲೇನಾಯ್ತು..?

ನ್ಯೂಸ್ ನಾಟೌಟ್ : ಜೆಟ್​ ​ಲ್ಯಾಗ್ ಎಂಬ ಪಬ್​ನಲ್ಲಿ ದರ್ಶನ್, ಅಭಿಷೇಕ್ ಅಂಬರೀಷ್ ಸೇರಿ ಅನೇಕ ಸೆಲೆಬ್ರೆಟಿಗಳು ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು ಇದು ಕಾನೂನಿಗೆ ಬಾಹಿರವಾಗಿತ್ತು ಮತ್ತು ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು ಜೊತೆಗೆ ಈ ಬಗ್ಗೆ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಪ್ರಕರಣದಲ್ಲಿ ಪಬ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪಾರ್ಟಿಯಲ್ಲಿ ಭಾಗಿ ಆದ ನಟ ದರ್ಶನ್, ಅಭಿಷೇಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ​ಗೆ ನೋಟಿಸ್ ಜಾರಿ ಆಗಿದೆ. ಸುಬ್ರಹ್ಮಣ್ಯನಗರ ಇನ್ಸ್​ಪೆಕ್ಟರ್​ ಸುರೇಶ್ ಅವ​ರಿಂದ ಮೂವರಿಗೂ ನೋಟಿಸ್ ಜಾರಿ ಆಗಿದೆ. ನಟರಾದ ಡಾಲಿ ಧನಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್ ಹಾಗೂ ನಿರ್ದೇಶಕ ತರುಣ್ ಸುಧೀರ್​ಗೆ ನೋಟಿಸ್​ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ‘ಕಾಟೇರ’ ಸಿನಿಮಾ ರಿಲೀಸ್ ಆಗಿ ಗೆದ್ದಿತು. ಅದರ‌ ಸಕ್ಸಸ್ ಸೆಲೆಬ್ರೇಷನ್ ಬಳಿಕ ದರ್ಶನ್, ಅಭಿಷೇಕ್ ಅಂಬರೀಷ್, ಧನಂಜಯ್ ಸೇರಿ ಅನೇಕರು ಬೆಂಗಳೂರಿನ ಒರಾಯನ್‌ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್​​ನಲ್ಲಿ ಪಾರ್ಟಿ ಮಾಡಿದ್ದರು. ಜನವರಿ‌ 3ರಂದು‌ ರಾತ್ರಿ‌ ಪಬ್​ಗೆ ಇವರು ಬೆಳಗಿನಜಾವದವರೆಗೆ ಪಾರ್ಟಿ ಮಾಡಿದ್ದರು.

ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ನಿಯಮವನ್ನು ಇಲ್ಲಿ ಮೀರಲಾಗಿದೆ ಎಂದು ದೂರಲಾಗಿದೆ.ಈಗಾಗಲೇ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ಅಭಿಷೇಕ್ ಅಂಬರೀಷ್​ಗೆ ನೋಟಿಸ್ ತಲುಪಿದೆ. ಪಾರ್ಟಿಯಲ್ಲಿ ಭಾಗಿ ಆಗಿದ್ದ ನಟ ಡಾಲಿ ಧನುಂಜಯ್, ನಟ ಚಿಕ್ಕಣ್ಣ, ನಿನಾಸಂ ಸತೀಶ್, ಡೈರಕ್ಟರ್ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಸದ್ಯ ಚಿತ್ರತಂಡ ವಿದೇಶದಲ್ಲಿದೆ ಎನ್ನಲಾಗಿದೆ.

https://newsnotout.com/2024/01/puttur-eshwaramangala-student/
https://newsnotout.com/2024/01/rama-mandira-news-live/

Related posts

ವಿದ್ಯಾರ್ಥಿನಿಯರ ಹಾಸ್ಟೆಲ್‌ ನ ಬಾತ್‌ ರೂಮ್‌ ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ..? ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆ..!

ಮಡಿಕೇರಿ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ..! ಸಾವಿನ ಹಿಂದಿದೆಯಾ ನಿಗೂಢ ಕಾರಣ?

ಬಡ್ಡಡ್ಕ: ಒಂದು ಮರ ಬೀಳ್ತದೆ ಅಂತ ಅಂದಾಜಿಸುತ್ತಿದ್ದಾಗ ಮನೆ ಮೇಲೆ ಬಿತ್ತು ಮತ್ತೊಂದು ಮರ..!, ಅಪಾರ ಹಾನಿ