ಕ್ರೀಡೆ/ಸಿನಿಮಾ

ಪ್ರೇಮಲೋಕ, ಪುಟ್ನಂಜ ಸೇರಿದಂತೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಖ್ಯಾತ ಸಾಹಸ ನಿರ್ದೇಶಕ ಇನ್ನಿಲ್ಲ..!ಬೈಕ್ ಮೆಕ್ಯಾನಿಕ್ ಆಗಿ ವೃತ್ತಿ ಆರಂಭಿಸಿದ್ದ ಜಾಲಿ ಬಾಸ್ಟಿನ್​ ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ ಓದಿ..

ನ್ಯೂಸ್ ನಾಟೌಟ್ :ಸೂಪರ್ ಸ್ಟಾರ್ ರಜನಿಕಾಂತ್​, ಮೆಗಾಸ್ಟಾರ್ ಚಿರಂಜೀವಿ ಕೈಯಲ್ಲಿ ಫೈಟ್‌ ಮಾಡಿಸಿದ್ದ ಹಾಗೂ ಕ್ರೇಜಿ ಸ್ಟಾರ್​ ರವಿಚಂದ್ರನ್​ ಅವರ ಸಿನಿಮಾಗಳಿಗೆ ಬೈಕ್ ಚೇಸಿಂಗ್ ಡ್ಯೂಪ್ ಸೇರಿದಂತೆ ಸ್ಟಂಟಿಂಗ್ ಮಾಡುತ್ತಿದ್ದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್​ (57) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದರು.ಜಾಲಿ ಬಾಸ್ಟಿನ್ ಅವರು ಕೇರಳ ಮೂಲದವರಾಗಿದ್ದು 1966ರಲ್ಲಿ‌ ಜನಿಸಿದ್ದರು. ಸುಮಾರು 900ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ‌ ಮಾಡಿದ್ದಾರೆ. ಮೂಲತಃ ಕೇರಳದವರಾಗಿದ್ದು ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಡಿಪ್ಲೊಮೋ ವ್ಯಾಸಂಗ ಮುಗಿಸಿದ್ದರು. ಬೈಕ್ ಮೆಕ್ಯಾನಿಕ್ ಆಗಿ ವೃತ್ತಿ ಆರಂಭಿಸಿದ್ದ ಜಾಲಿ ಬಾಸ್ಟಿನ್ ನಂತರ ಸಿನಿಮಾ ರಂಗದಲ್ಲಿ ಸ್ಟಂಟಿಂಗ್ ಮಾಡಿ ಭಾರಿ ಜನಮನ್ನಣೆಗೆ ಪಾತ್ರರಾಗಿದ್ದರು.

ಕೇವಲ ತಮ್ಮ 17ನೇ ವಯಸ್ಸಿನಲ್ಲಿಯೇ ಸ್ಯಾಂಡಲ್​ವುಡ್​ನ ಕ್ರೇಜಿ ಸ್ಟಾರ್​ ರವಿಚಂದ್ರನ್​ ಅವರಿಗೆ ಬೈಕ್ ಚೇಸಿಂಗ್ ಡ್ಯೂಪ್ ಆಗಿ ಕೆಲಸ ಮಾಡಿದ್ದರು. ಪ್ರೇಮಲೋಕ, ಪುಟ್ನಂಜ, ಅಣ್ಣಯ್ಯ, ಶಾಂತಿ ಕ್ರಾಂತಿ, ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಿಗೆ ಕೆಲಸ ಮಾಡಿ ತಮ್ಮ ಸ್ಟಂಟಿಂಗ್​ ಮೂಲಕ ಖ್ಯಾತಿ ಗಳಿಸಿದ್ದರು.

ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಹೆಸರು ಮಾಡಿದ್ದ ಜಾಲಿ ಬಾಸ್ಟಿನ್, ನಿನಗಾಗಿ, ಕಾದಿರುವೆ ಚಿತ್ರದ ಮೂಲಕ ನಿರ್ದೇಶಕನ ಹುದ್ದೆ ಅಲಂಕರಿಸಿದ್ದರು. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಬಾಸ್ಟಿನ್​ ಅವರಿಗೆ ಇತ್ತು ಅನ್ನೋದು ಹೆಮ್ಮೆಯ ಸಂಗತಿ.

ಸದ್ಯ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದಲ್ಲಿ ಜಾಲಿ ನಟಿಸುತ್ತಿದ್ದರು. ಭೀಮ ಚಿತ್ರಕ್ಕೆ ಒಂದು ಚೇಸಿಂಗ್ ಆಕ್ಷನ್ ಸನ್ನಿವೇಶಕ್ಕೆ ದುನಿಯಾ ವಿಜಯ್ ಮಾತುಕತೆ ಮಾಡಿದಾಗ ಆ ಸನ್ನಿವೇಶವನ್ನು ಅಚ್ಚುಕಟ್ಟಾಗಿ ಯಾವುದೇ ರೀತಿ ತೊಂದರೆ ಇಲ್ಲದೆ ಮಾಡುವುದು ಯಾರು ಎಂಬ ಬಂದಿತ್ತು. ಹೀಗೆ ತಲೆ ಕೆಡಿಸಿಕೊಂಡು ಯೋಚನೆ ಮಾಡಿದಾಗ ಎಲ್ಲರ ಕಣ್ಣು ಮುಂದೆ ಬಂದಿದ್ದು ಜಾಲಿ ಮಾಸ್ಟರ್ ಅವರು. ರಾಮನಗರದ ಸರ್ಕಲ್‌ನಲ್ಲಿ ರಾತ್ರಿ ಪೂರ್ತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತು ಭೀಮ ಚಿತ್ರದ ವಾಹನಗಳ ಡಿಕ್ಕಿ ಸನ್ನಿವೇಶವನ್ನು ಅತಿ ದಟ್ಟಣೆ ಇರುವ ಬೆಂಗಳೂರು ಮೈಸೂರು ರಸ್ತೆಯ ರಾಮನಗರ ಸರ್ಕಲ್‌ನಲ್ಲಿ ಕಂಪೋಸ್ ಮಾಡಿಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ. ಹೀಗಾಗಿ ಈ ಘಟನೆ ಚಿತ್ರರಂಗಕ್ಕಾದ ನಷ್ಟ.ಇದನ್ನು ನಂಬಲು ಸಹ ಅಸಾಧ್ಯವಾದ ಮಾತು ಎಂದು ಭೀಮ ಚಿತ್ರತಂಡ ಸಂತಾಪ ಸೂಚಿಸಿದೆ. 

Related posts

ಇಂದು(ಎ.11) ಹೈವೋಲ್ಟೇಜ್ ಮ್ಯಾಚ್, ಮುಂಬೈ- ಆರ್ ​ಸಿಬಿ ಮುಖಾಮುಖಿ, ಟಾಸ್ ಗೆದ್ದ ಮುಂಬೈ

ಮೈಸೂರು:ಮ್ಯೂಸಿಯಂನಲ್ಲಿ ಬಾಹುಬಲಿ ನಟ ಪ್ರಭಾಸ್ ಹೋಲುವ ಮೇಣದ ಪ್ರತಿಮೆ,ಈ ಪ್ರತಿಮೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದೇಕೆ?

ಸೆಲ್ಫಿಗಾಗಿ ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್! ಮುಂದೇನಾಯ್ತು ನೀವೇ ನೋಡಿ, ಇಲ್ಲಿದೆ ವೈರಲ್ ವಿಡಿಯೋ