Uncategorized

ರೂಂನಲ್ಲಿದ್ದ ಸಿಲಿಂಡರ್ ಸ್ಪೋಟ, 8 ಮಂದಿ ದಾರುಣ ಸಾವು

ನ್ಯೂಸ್ ನಾಟೌಟ್ : ಬೆಂಗಳೂರು ಹೊರಹೊಲಯದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ರೂಮ್‍ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು 8 ಮಂದಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಠಾಣಾ ವ್ಯಾಪ್ತಿಯ ಮೇಡಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,ಕಳೆದ ತಿಂಗಳ 26ನೇ ತಾರೀಖು ಮಧ್ಯರಾತ್ರಿ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಗಾಯಗೊಂಡು ಆಸ್ಪತ್ರೆ ಸೇರಿದ್ದ 8 ಮಂದಿ ದಾರುಣವಾಗಿ ಸಾವನಪ್ಪಿದ್ದಾರೆ. ಸುಮಯ್ ಗುಪ್ತಾ, ತಿಲಕ್ ರಾಮ್, ಸನೋಜ್ ಶರ್ಮಾ, ನೀರಜ್ ಭಾರತಿ, ಚಂದ್ರಪಾಲ್, ಲಕ್ಷಣ್, ನಿಕೋನ್ ಅನ್ಸಾರಿ ಮತ್ತು ಅಮಿತ್ ಕುಮಾರ್ ಮೃತರು.

ಚಿಕ್ಕತಿರುಪತಿ ರಸ್ತೆಯ ಮೇಡಿಹಳ್ಳಿಯಲ್ಲಿ ಭಾಸ್ಕರ್ ಎಂಬುವರ ರೂಮ್ ನಲ್ಲಿ 8 ಮಂದಿ ಯುವಕರು ವಾಸವಾಗಿದ್ದರು. ಎಲ್ಲರೂ ಬಿಹಾರ ಮೂಲದವರಾಗಿದ್ದು, 1 ವರ್ಷದಿಂದ ಮೇಡಿಹಳ್ಳಿಯಲ್ಲಿ ವಾಸವಾಗಿದ್ದರು.ಚಿಕ್ಕ ಅಂಗಡಿ ರೂಮ್‍ನಂತಿದ್ದು, ಅದರಲ್ಲಿ 8 ಮಂದಿ ವಾಸವಾಗಿದ್ದರು. ಎಲ್ಲರೂ ಒಂದೇ ಕಡೆ ಗಾರ್ಮೆಂಟ್ಸ್ ಫ್ಯಾಕ್ಟರಿಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. 27ನೇ ತಾರೀಖು ಇಬ್ಬರು ಸಾವನ್ನಪ್ಪಿದ್ರೆ, ಆ ಬಳಿಕ ಮತ್ತೊಬ್ಬ ಪ್ರಾಣಬಿಟ್ಟಿದ್ದಾನೆ. ಆ ನಂತರ 2 ದಿನ ಕಳೆದ ಮೇಲೆ ನಾಲ್ವರು ಸಾವನ್ನಪ್ಪಿದ್ದಾರೆ. ಮೊನ್ನೆ ರಾತ್ರಿ ಅನ್ಸಾರಿ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆಂದು ತಿಳಿದುಬಂದಿದೆ.

Related posts

Chamarajeshwara Temple: ‘ಹಾಯ್‌ ಪುಟ್ಟಾ…ಹೇಗಿದಿಯಾ..? ನಿನ್ನ ನೆನಪೇ ಕಾಡುತ್ತಿದೆ’, ದೂರವಾದ ಜೀವದ ಗೆಳತಿಗೆ ಪತ್ರ ಬರೆದು ದೇವರ ಹುಂಡಿಗೆ ಹಾಕಿದ ಪ್ರೇಮಿ..!

ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿ ಸಾವು

ನೀಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು..!