ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಕನ್ನಡದಲ್ಲಿ ಸಿನಿಮಾ ನಿರ್ಮಿಸಲಿದ್ದಾರೆ ಎಂಎಸ್ ಧೋನಿ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : ಇತ್ತೀಚೆಗೆ ಕ್ರಿಕೆಟರ್ ಎಂಎಸ್ ಧೋನಿಗೆ ಸಿನಿಮಾ ಮೇಲೆ ಪ್ರೀತಿ ಹೆಚ್ಚಾಗಿದ್ದು, ಟೀಂ ಇಂಡಿಯಾದಿಂದ ಹೊರ ಬಂದ ಬಳಿಕ ಧೋನಿ ಎಂಟರ್​ಟೇನ್​ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಒಂದು ಸಿನಿಮಾ ಕೂಡ ನಿರ್ಮಾಣ ಆಗಿದೆ. ಶೀಘ್ರವೇ ಅವರ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕನ್ನಡ ಸಿನಿಮಾ ಕೂಡ ಮೂಡಿ ಬರಲಿದೆ ಎಂದು ವರದಿ ತಿಳಿಸಿದೆ.

ಧೋನಿ ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಮೊದಲು ತಮಿಳು ಭಾಷೆಯಲ್ಲಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಥಿಯೇಟರ್​ನಲ್ಲೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರು ಕನ್ನಡ ಚಿತ್ರರಂಗದತ್ತ ಒಲವು ತೋರಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಿದೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’, ‘ಕಾಟೇರ’ ರೀತಿಯ ಸಿನಿಮಾಗಳಿಂದ ಪರಭಾಷೆಯವರೂ ಕನ್ನಡ ಚಿತ್ರರಂಗದತ್ತ ಮುಖಮಾಡುವಂತೆ ಆಗಿದೆ.

ಹೀಗಾಗಿ, ಪರಭಾಷೆಯ ನಿರ್ಮಾಪಕರು ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಈಗ ಧೋನಿ ಅವರು ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿಚಾರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ತಂಡದಲ್ಲಿ ಯಾರೆಲ್ಲ ಇರುತ್ತಾರೆ, ಯಾರು ನಿರ್ದೇಶನ ಮಾಡುತ್ತಾರೆ ಎಂಬ ವಿಚಾರ ಇನ್ನಷ್ಟೇ ರಿವೀಲ್ ಆಗಬೇಕಿದೆ.

Related posts

Titanic ಸಬ್​ಮೆರಿನ್ ದುರಂತ! ಟೈಟಾನಿಕ್ ಸಿನಿಮಾ ರಿ-ರಿಲೀಸ್​ಗೆ ಮುಂದಾದ ನೆಟ್​ಫ್ಲಿಕ್ಸ್!​ ನೆಟ್ಟಿಗರು ಟೀಕಿಸಿದ್ದೇಕೆ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೊಸ ಅಧ್ಯಕ್ಷ

ಚುನಾವಣಾ ಬಾಂಡ್‌ ಅಕ್ರಮ ಪ್ರಕರಣದಿಂದ ನಿರ್ಮಲಾ ಸೀತಾರಾಮನ್‌ ಮತ್ತು ನಳಿನ್ ಕುಮಾರ್ ಕಟೀಲ್ ಗೆ ಬಿಗ್ ರಿಲೀಫ್..!​ ಎಫ್‌.ಐ.ಆರ್ ರದ್ದುಪಡಿಸಿ ಹೈಕೋರ್ಟ್ ಆದೇಶ