ಕ್ರೈಂರಾಜಕೀಯವಿಡಿಯೋವೈರಲ್ ನ್ಯೂಸ್

ತೇಜಸ್ವಿ ಯಾದವ್ ಬದಲು ಹೆಸರು ತಪ್ಪಿ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ..! ಮುಜುಗರಕ್ಕೊಳಗಾದ ಕಂಗನಾ ರಣಾವತ್..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಕಂಗನಾ ರಣಾವತ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬದಲು ತಮ್ಮದೇ ಪಕ್ಷದ ತೇಜಸ್ವಿ ಸೂರ್ಯರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ. ತೇಜಸ್ವಿ ಮತ್ತು ತೇಜಸ್ವಿ ಎಂಬ ಹೆಸರಿನಲ್ಲಿರುವ ಸಾಮ್ಯತೆಯಿಂದಾಗಿ ಕಂಗನಾ ರಣಾವತ್ ಈ ಯಡವಟ್ಟು ಮಾಡಿಕೊಂಡಿದ್ದಾರೆ.

“ಹಾಳಾದ ರಾಜಕುಮಾರರ ಪಕ್ಷವೊಂದಿದೆ… ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿ ಇರಬಹುದು ಅಥವಾ ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಇರಬಹುದು” ಎಂದು ಕಂಗನಾ ಹೇಳಿದ್ದಾರೆ. ವಾಸ್ತವವಾಗಿ ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕಂಗನಾ ವಾಗ್ದಾಳಿಯಲ್ಲಿ ಟಾರ್ಗೆಟ್ ಆಗಬೇಕಿತ್ತು. ತೇಜಸ್ವಿ ಯಾದವ್ ನವರಾತ್ರಿ ವೇಳೆ ಮೀನು ತಿನ್ನುತ್ತಿರುವ ವಿಡಿಯೋ ಇತ್ತೀಚೆಗೆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಪ್ರಮುಖ ಸಂಘರ್ಷದ ವಿಷಯವಾಗಿ ಪರಿಣಮಿಸಿತ್ತು.

ಇದನ್ನೇ ಮುಂದಿಟ್ಟುಕೊಂಡು ಕಂಗನಾ ರಣಾವತ್ ಟೀಕಾಪ್ರಹಾರ ನಡೆಸಲು ಮುಂದಾಗಿದ್ದರು. ಆದರೆ ತೇಜಸ್ವಿ ಯಾದವ್ ಬದಲು, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ತಮ್ಮದೇ ಪಕ್ಷದ ಸಂಸದ ತೇಜಸ್ವಿ ಸೂರ್ಯ ಹೆಸರನ್ನು ಪ್ರಸ್ತಾಪಿಸುವ ಮೂಲಕ ಕಂಗನಾ ಮುಜುಗರಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ, ಕಂಗನಾ ರಣಾವತ್ ಹೇಳಿಕೆಯ ವಿಡಿಯೋ ಹಂಚಿಕೊಂಡಿರುವ ತೇಜಸ್ವಿ ಯಾದವ್, “(ಈ ಮಹಿಳೆ ಯಾರು?, ಅವರು ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Related posts

ಆಸ್ಪತ್ರೆಯ ಶವಾಗಾರದಲ್ಲಿ ಹೆಣದ ಎದುರಲ್ಲೇ ಕ್ಲೀನರ್ ಮತ್ತು ಮಹಿಳೆ ರಾಸಲೀಲೆ..!, ಛೀ..ಥೂ ಅಸಹ್ಯ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ ಇಲ್ಲಿದೆ ವೀಕ್ಷಿಸಿ

ಬಿಜೆಪಿ ಸೇರಿದಕ್ಕೆ ಪಾದ್ರಿಯನ್ನು ವಜಾಗೊಳಿಸಿತಾ ಚರ್ಚ್? ಈ ಬಗ್ಗೆ ಚರ್ಚ್ ಹೇಳಿದ್ದೇನು?

ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾ ಸಂಸದ, ಯಾರೀತ ಸಂಸದ..?